Bengaluru, ಫೆಬ್ರವರಿ 26 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮಂಗಳವಾರ ಫೆಬ್ರುವರಿ 25ರ ಸಂಚಿಕೆಯಲ್ಲಿ ಜಯಂತ್ ಆಸ್ಪತ್ರೆಯ ವಾರ್ಡ್‌ನೊಳಕ್ಕೆ ಬರುವುದಕ್ಕೂ ಮೊದಲೇ, ವಿಶ್ವ ಅಲ್ಲಿಂದ ಹೊರಹೋಗುತ್ತಾನೆ. ಆದರೂ ಜಯಂತ್‌ಗೆ ಯಾರೋ ಕೋಣೆಗೆ ಬಂದು ಹೋಗಿರುವ ಸಂಶಯ ಉಂಟಾಗುತ್ತದೆ, ಯಾರು ಬಂದಿದ್ದರು ಎಂದು ಜಾಹ್ನವಿಯನ್ನು ಕೇಳುತ್ತಾನೆ, ಆಕೆ ಉತ್ತರಿಸುವುದಿಲ್ಲ. ಬಳಿಕ ಜಯಂತ್ ಸುಮ್ಮನಾಗುತ್ತಾನೆ. ಇತ್ತ ಮತ್ತೆ ವಿಶ್ವನ ಬಳಿ ತನು, ನಾವು ಹೋಗಿ ಜಯಂತ್ ಸರ್‌ನ ಮೀಟ್ ಮಾಡೋಣ, ಅಲ್ಲಿ ಜಾಹ್ನವಿ ಇರಬಹುದು, ಅವಳನ್ನು ಮಾತನಾಡಿಸೋಣ, ಏನಾಗಿದೆ ಎಂದು ಕೇಳೋಣ ಎಂದು ಹೇಳುತ್ತಾಳೆ. ಆಗ ವಿಶ್ವ ಅವಳಿಗೆ ಬುದ್ದಿ ಹೇಳುತ್ತಾ, ಹಾಗೆಲ್ಲ ಹೋಗಿ ಅವರಿಗೆ ಕಿರಿಕಿರಿ ಉಂಟುಮಾಡುವುದು ಸರಿಯಲ್ಲ ಎಂದು ಹೇಳುತ್ತಾನೆ.

ಜಾಹ್ನವಿಯನ್ನು ಇನ್ನೂ ಎರಡು ಮೂರು ದಿನ ಇಲ್ಲಿಯೇ ಉಳಿಸಿಕೊಳ್ಳಬೇಕಾಗುತ್ತದೆ ಎಂದು ಅವಳನ್ನು ಪರೀಕ್ಷಿಸಿದ ವೈದ್ಯರು ಹೇಳುತ್ತಾರೆ, ಅದಕ್ಕೆ ಜಯಂತ್ ಪರಿಪರಿಯಾಗಿ ವಿನಂತಿಸಿಕೊಳ್ಳುತ್ತಾ, ದಯವಿಟ್ಟು ಹಾಗೆ ಮಾ...