Bangalore, ಮೇ 1 -- ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋದ 19.15 ಕಿಮೀ ಉದ್ದದ ಹಳದಿ ಮಾರ್ಗ( ಆರ್‌ ವಿ ರಸ್ತೆ-ಬೊಮ್ಮಸಂದ್ರ) ಪೂರ್ಣಗೊಂಡಿದ್ದರೂ ರೈಲು ಓಡುವುದು ಯಾವಾಗ ಎಂಬ ಪ್ರಶ್ನೆ ಉತ್ತರ ಮರೀಚಿಕೆಯಾಗಿತ್ತು. ಪ್ರತಿ ಬಾರಿಯೂ ಬಿಎಂಆರ್‌ ಸಿಎಲ್‌ ಒಂದು ಎರಡು ತಿಂಗಳ ಡೆಡ್‌ ಲೈನ್‌ ನೀಡುತ್ತಾ ಬಂದಿತ್ತು. ಈ ಮಾರ್ಗದ ಪ್ರಯಾಣಿಕರಿಗೆ ಸಂತಸದ ಸುದ್ದಿ ಏನೆಂದರೆ ಎಲ್ಲ ಅಡಚಣೆಗಳನ್ನು ನಿವಾರಿಸಿಕೊಂಡು ಈ ತಿಂಗಳ ಮಧ್ಯ ಭಾಗದಲ್ಲಿ ಮೆಟ್ರೋ ರೈಲು ಆರ್‌ ವಿ ರಸ್ತೆಯಿಂದ ಬೊಮ್ಮಸಂದ್ರವರೆಗೆ ಸಂಚಾರ ಆರಂಭಿಸಲಿದೆ. ಈಗಾಗಲೇ ತಿತಾಘಡದಿಂದ 3ನೇ ಸೆಟ್‌ ಮೆಟ್ರೋ ಬೋಗಿಗಳು ಬೆಂಗಳೂರಿನತ್ತ ಹೊರಟಿವೆ. ಒಂದು ಸೆಟ್‌ ನಲ್ಲಿ ಆರು ಬೋಗಿಗಳಿರುತ್ತವೆ. ಏಪ್ರಿಲ್‌ 29ರಂದು ಪಶ್ಚಿಮ ಬಂಗಾಳದ ಕೊಲ್ಕತ್ತಾದ ತಿತಾಘಢ ರೈಲ್‌ ಸಿಸ್ಟಮ್ಸ್‌ ಲಿ. ಕಾರ್ಖಾನೆಯಿಂದ ಬೋಗಿಗಳನ್ನು ಕಳುಹಿಲಾಗಿದೆ. ಉಳಿದ ಮೂರು ಸೆಟ್‌ ರೈಲು ಮೇ 3ರಂದು ಕಾರ್ಖಾನೆಯಿಂದ ಹೊರಡಲಿದ್ದು, ಎಲ್ಲ ಆರು ಬೋಗಿಗಳು ಮೇ 15ರ ವೇಳೆಗೆ ಬೆಂಗಳೂರು ತಲುಪಲಿವೆ. ಉಳಿದ ಎರಡು ಸೆಟ್‌ ರೈಲು ...