ಭಾರತ, ಫೆಬ್ರವರಿ 10 -- ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಫೆಬ್ರುವರಿ 9ರಿಂದ ಜಾರಿಗೆ ಬಂದಿದ್ದು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಿರ್ಧಾರದಿಂದ ಅನೇಕ ಪ್ರಯಾಣಿಕರು ನಿರಾಶೆಗೊಂಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಆಕ್ರೋಶ ಹೊರಹಾಕುತ್ತಿದ್ದು, ಪ್ರಯಾಣ ದರವನ್ನು ಶೇ.40-45ರಷ್ಟು ಏರಿಕೆ ಮಾಡಿರುವುದಕ್ಕೆ ಅಸಮಾಧಾನ ಹೊರಹಾಕುತ್ತಿದ್ದಾರೆ. ಮಾರ್ಗ ಮತ್ತು ದೂರವನ್ನು ಅವಲಂಬಿಸಿ ತಮ್ಮ ಪ್ರಯಾಣದ ವೆಚ್ಚವು 80-90 ಶೇಕಡದಷ್ಟು ಹೆಚ್ಚಾಗಿದೆ ಎಂದು ಹಲವು ಪ್ರಯಾಣಿಕರು ಹೇಳುತ್ತಿದ್ದಾರೆ.

ಸಾರ್ವಜನಿಕ ಸಾರಿಗೆ ವ್ಯವಸ್ಥೆ ಹೆಚ್ಚು ದುಬಾರಿಯಾಗುತ್ತಿರುವ ಬಗ್ಗೆ ಅನೇಕ ಪ್ರಯಾಣಿಕರು ಕಳವಳ ವ್ಯಕ್ತಪಡಿಸಿದ್ದಾರೆ. ಈ ನಡುವೆ ತಮ್ಮ ದೈನಂದಿನ ಪ್ರಯಾಣಕ್ಕಾಗಿ ಸಮೂಹ ಸಾರಿಗೆಗಿಂತ ಖಾಸಗಿ ವಾಹನವೇ ಉತ್ತಮ ಎಂದು ಕೆಲವರು ಯೋಚಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಳಕೆದಾರರೊಬ್ಬರು, "ನಾನು ಪ್ರತಿದಿನ 70 ಕಿ.ಮೀ ಪ್ರಯಾಣಿಸುತ್ತೇನೆ, ಈಗ ಮೆಟ್ರೋ ಬಳಸುವುದಕ್ಕಿಂತ ನನ್ನ ಬೈಕ್ ಕೊಂಡೊಯ್ಯುವುದೇ ಅಗ್ಗವ...