ಭಾರತ, ಫೆಬ್ರವರಿ 13 -- ಬೆಂಗಳೂರು ನಗರದ ಪ್ರಯಾಣಿಕರ ಜೀವನಾಡಿಯಾಗಿರುವ ನಮ್ಮ ಮೆಟ್ರೋ ಪ್ರಯಾಣ ದರವನ್ನು ಇತ್ತೀಚೆಗಷ್ಟೇ ಏಕಾಏಕಿ ಏರಿಸಲಾಗಿತ್ತು. ಟಿಕೆಟ್‌ ದರ ಏರಿಕೆ ಬೆನ್ನಲ್ಲೇ ಎಲ್ಲೆಡೆ ಪ್ಯಾಪಕ ಆಕ್ರೋಶ ಕೇಳಿಬಂದಿತ್ತು. ಅಲ್ಲದೆ ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಗಣನೀಯ ಇಳಿಕೆ ಕಂಡಿತ್ತು. ಇದೀಗ ಜನರ ಒತ್ತಾಯಕ್ಕೆ ಮಣಿದಿರುವ ಬಿಎಂಆರ್‌ಸಿಎಲ್‌, ಪ್ರಯಾಣಿಕರಿಗೆ ಸಣ್ಣ ಸಿಹಿ ಸುದ್ದಿ ಕೊಟ್ಟಿದ್ದು, ದರ ಇಳಿಸುವ ಚಿಂತನೆ ಮಾಡಿದೆ. ಈ ಬಗ್ಗೆ BMRCL ಎಂಡಿ ಮಹೇಶ್ವರ ರಾವ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೆಟ್ರೋ ಪ್ರಯಾಣ ದರವನ್ನು ಮತ್ತೆ ಪರಿಷ್ಕರಣೆ ಮಾಡುವುದಿಲ್ಲ. ಆದರೆ ಸ್ಟೇಜ್ ಬೈ ಸ್ಟೇಜ್ ರೇಟ್ ಮರ್ಜ್ ಮಾಡುತ್ತೇವೆ ಎಂದು ಮಹೇಶ್ವರ್ ರಾವ್ ತಿಳಿಸಿದ್ದಾರೆ. ಇದರೊಂದಿಗೆ ದರ ಇಳಿಕೆ ನಿರೀಕ್ಷೆಯಲ್ಲಿದ್ದ ಪ್ರಯಾಣಿಕರಿಗೆ ಮತ್ತೆ ನಿರಾಶೆಯಾಗಿದೆ.

ಟಿಕೆಟ್‌ ದರ ಏರಿಕೆ ಕುರಿತು ಸಾರ್ವಜನಿಕರ ವಿರೋಧ ವ್ಯಕ್ತವಾಗಿದ್ದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದರು. ಎಲ್ಲೆಲ್...