ಭಾರತ, ಫೆಬ್ರವರಿ 11 -- ಪ್ರತಿನಿತ್ಯ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಕೆಲ ಹವ್ಯಾಸಗಳು ನಮ್ಮ ಜೀವನವನ್ನು ಸುಂದರವಾಗಿಸಿದರೆ, ಇನ್ನೂ ಕೆಲ ಅಭ್ಯಾಸಗಳು ಅದೇ ಜೀವನವನ್ನೇ ಅಪಾಯಕ್ಕೆ ದೂಡುತ್ತವೆ. ಒಳ್ಳೆಯ ಅಭ್ಯಾಸಗಳು ಯಶಸ್ಸು ತಂದುಕೊಟ್ಟರೆ, ಕೆಟ್ಟ ಅಭ್ಯಾಸಗಳು ನಮ್ಮ ನಾಶಕ್ಕೆ ಕಾರಣವಾಗುತ್ತವೆ. ಈ ಹವ್ಯಾಸಗಳು ನಮ್ಮ ಆರೋಗ್ಯದ ಮೇಲೆಯು ಅತಿಯಾಗಿ ಪರಿಣಾಮ ಬೀರಬಹುದು.

ನಮ್ಮ ಜೀವನವನ್ನೇ ಹಾಳು ಮಾಡುತ್ತಿರುವ ಕೆಲವು ದೈನಂದಿನ ತಪ್ಪುಗಳ ಬಗ್ಗೆ ಈ ಲೇಖನದಲ್ಲಿ ಪಟ್ಟಿ ಮಾಡಲಾಗಿದೆ. ಅಪ್ಪಿತಪ್ಪಿಯು ಈ ತಪ್ಪುಗಳನ್ನು ಜೀವನದಲ್ಲಿ ಮುಂದುವರಿಸಬೇಡಿ. ಇದರಿಂದ ನಾವು ಮಾನಸಿಕ ಮತ್ತು ದೈಹಿಕವಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ತಪ್ಪುಗಳು ಯಾವುವು ನೋಡಿ.

ನಮ್ಮ ಜೀವನಶೈಲಿಯು ಕ್ರಿಯಾಶೀಲವಾಗಿದ್ದರೆ ಮಾತ್ರ ದೈಹಿಕ ಮತ್ತು ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ. ದೈಹಿಕವಾಗಿ ಸಕ್ರಿಯವಾಗಿಲ್ಲವೆಂದರೆ, ದೇಹದಲ್ಲಿರುವ ಸ್ನಾಯುಗಳು ದುರ್ಬಲವಾಗುತ್ತದೆ ಮತ್ತು ಚಯಾಪಚಯವನ್ನು ನಿಧಾನಗೊಳಿಸಿ, ಹೃದಯಸಂಬಂಧಿ ಹಾಗೂ ಮಧು...