ಬೆಂಗಳೂರು, ಮಾರ್ಚ್ 1 -- ನವದೆಹಲಿ: 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ದುಬೈನಲ್ಲಿ ಆಡುವ ಮೂಲಕ ಟೀಮ್ ಇಂಡಿಯಾ ಲಾಭ ಪಡೆಯುತ್ತಿದೆ ಎಂದು ವಾದಿಸಿದ ಎಲ್ಲಾ ಮಾಜಿ ಕ್ರಿಕೆಟಿಗರು ಮತ್ತು ಕ್ರಿಕೆಟ್ ತಜ್ಞರನ್ನು ಭಾರತದ ಮಾಜಿ ಕ್ರಿಕೆಟಿಗ ಮತ್ತು ಪ್ರಸ್ತುತ ವೀಕ್ಷಕವಿವರಣೆಗಾರ ಸುನಿಲ್ ಗವಾಸ್ಕರ್ ಟೀಕಿಸಿದ್ದಾರೆ. ಇಂಗ್ಲೆಂಡ್​ ಮಾಜಿ ಕ್ರಿಕೆಟಿಗರಾದ ನಾಸಿರ್ ಹುಸೇನ್, ಮೈಕೆಲ್ ಅಥರ್ಟನ್ ಅವರನ್ನೇ ಗುರಿಯಾಗಿಸಿಕೊಂಡು ಈ ಹೇಳಿಕೆ ನೀಡಿದ್ದಾರೆ. ಭಾರತದ ಬಗ್ಗೆ 'ದೂರುವ' ತಜ್ಞರು ಪಂದ್ಯಾವಳಿಯಲ್ಲಿ ತಮ್ಮ ದೇಶಗಳ ಪ್ರಗತಿಯ ಬಗ್ಗೆ ಗಮನ ಹರಿಸಬೇಕು ಎಂದು ತಿರುಗೇಟು ನೀಡಿದ್ದಾರೆ. ಅವರೆಲ್ಲರೂ ಭಾರತೀಯ ಕ್ರಿಕೆಟ್​ನಿಂದಲೇ ಸಂಬಳ ಪಡೆಯುತ್ತಿದ್ದಾರೆ ಎಂಬುದು ಗೊತ್ತಿರಲಿ ಎಂದು ಕಿಡಿಕಾರಿದ್ದಾರೆ.

ಸ್ಕೈ ಸ್ಪೋರ್ಟ್ಸ್ ಪಾಡ್​ಕಾಸ್ಟ್​ನಲ್ಲಿ ಮಾತನಾಡಿದ ನಾಸಿರ್ ಹುಸೇನ್ ಮತ್ತು ಅಥರ್ಟನ್, ಈ ಸನ್ನಿವೇಶದಲ್ಲಿ ಭಾರತಕ್ಕೆ ನಂಬಲಾಗದ ಅನುಕೂಲ ಸಿಗುತ್ತಿದೆ ಎಂದು ಹೇಳಿದ್ದರು. ಒಂದೇ ಮೈದಾನದಲ್ಲಿ ಆಡುವ ಮೂಲಕ ಅದರ ಲಾಭ ಪಡೆಯುತ್ತಿದ್ದಾರೆ ಎಂದಿದ...