ಭಾರತ, ಏಪ್ರಿಲ್ 22 -- ಒಬ್ಬ ವ್ಯಕ್ತಿ, ಒಂದು ಸಮಾಜ, ಒಂದು ಊರು, ಒಂದು ನಗರ, ಒಂದು ಜಿಲ್ಲೆ, ಒಂದು ರಾಜ್ಯ, ಹಾಗೆ ಒಂದು ದೇಶ ಒಂದೇ ದಿನದಲ್ಲಿ ಕೆಟ್ಟದಾಗುವುದಿಲ್ಲ. ಒಳ್ಳೆಯದಾಗಲಿ, ಕೆಟ್ಟದಾಗಲಿ ಅದೊಂದು ಪ್ರಕ್ರಿಯೆ. ವರ್ಷಾನುಗಟ್ಟಲೆ ಅದದೇ ಪುನರಾವರ್ತನೆ ಆದುದರ ಫಲವದು. ಒಂದು ತಲೆಮಾರಿನ ನಂತರ ಅದು ಬದುಕುವ ರೀತಿ ಆಗಿ ಬಿಡುತ್ತದೆ. ಯಾವ ಕ್ಷಣದಲ್ಲಿ ಕೆಟ್ಟದರ ಕಡೆಗೆ ನಾವು ಹೊರಳಿದೆವು? ಎನ್ನುವುದನ್ನು ನಾವು ನಿಖರವಾಗಿ ಚರಿತ್ರೆಯ ಪುಟಗಳನ್ನು ತೆಗೆದಾಗ ಖಂಡಿತ ಉತ್ತರ ಸಿಗುತ್ತದೆ. ಆದರೆ ನಾವು ಆ ತಪ್ಪನ್ನು ತಿದ್ದದೆ ಬಿಟ್ಟ ಕಾರಣ ಇಂದಿನ ಸ್ಥಿತಿಗೆ ತಲುಪಿದ್ದೇವೆ.

ಭಾರತ ಎಂದರೆ ರಸ್ತೆಗಳಲ್ಲಿ ಚಿನ್ನ, ವಜ್ರ-ವೈಡೂರ್ಯಗಳನ್ನು ರಸ್ತೆಯಲ್ಲಿ ಮಾರುತ್ತಿದ್ದ ದೇಶ ಎಂದೂ, ಕೇವಲ ಒಂದು ಸುಳ್ಳು ಹೇಳಿದರೆ ಜೀವ ಉಳಿಸಿಕೊಳ್ಳುವ ಅಥವಾ ಅಪಾರ ಆಸ್ತಿ ತನ್ನದಾಗಿಸಿ ಕೊಳ್ಳುವ ಅವಕಾಶವಿದ್ದೂ ಸುಳ್ಳು ಹೇಳದವರ ದೇಶ ಎಂದು ಪ್ರಸಿದ್ಧವಾಗಿದ್ದ ಭಾರತ ಇಂದು ಸುಳ್ಳರ, ಆಷಾಡಭೂತಿಗಳ, ಸಮಯಸಾಧಕರ, ಸ್ವಸುಖಕ್ಕಾಗಿ ತಂದೆ ಮಗನನ್ನು, ಮಕ್ಕಳು ಹೆ...