ಭಾರತ, ಮೇ 14 -- ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಆಸೆ-ಆಕಾಂಕ್ಷೆಗಳನ್ನು ಹೊತ್ತು ಬದುಕನ್ನು ಸಾಗಿಸುತ್ತಿರುತ್ತಾನೆ. ಸಿರಿವಂತರು ಅಥವಾ ಬಡವರು, ಸಾಮಾನ್ಯ ವ್ಯಕ್ತಿಗಳು ಅಥವಾ ಸಾಧಕರೇ ಆಗಿರಬಹುದು, ವಿದ್ಯಾವಂತರು ಅಥವಾ ಅವಿದ್ಯಾವಂತರೇ ಆಗಿರಬಹುದು. ಎಲ್ಲರಿಗೂ ಕೂಡ ಅವರದೇ ಆದ ಆಕಾಂಕ್ಷೆಗಳು, ಗುರಿಗಳು ಇದ್ದೇ ಇರುತ್ತದೆ. ಈ ಆಕಾಂಕ್ಷೆಗಳು ಪುಟ್ಟದು ಅಥವಾ ದೊಡ್ಡದೂ ಆಗಿರಬಹುದು. ಆದರೆ ಎಲ್ಲವೂ ಆಕಾಂಕ್ಷೆಗಳೇ ಎನ್ನುವುದನ್ನು ನೆನಪಿನಲ್ಲಿಡಬೇಕು. ಮಕ್ಕಳಿಗೆ ಕ್ರೀಡೆ, ಕಲೆ, ಶೈಕ್ಷಣಿಕ ಆಕಾಂಕ್ಷೆಗಳಿದ್ದರೆ, ವಯಸ್ಕರಿಗೆ ದೈಹಿಕ ಆರೋಗ್ಯ, ಫಿಟ್‌ನೆಸ್, ಸೌಂದರ್ಯ, ಉದ್ಯೋಗ, ಆರ್ಥಿಕ ವಿಚಾರದ ಬಗ್ಗೆ ಆಕಾಂಕ್ಷೆಗಳಿರುತ್ತವೆ. ಮಧ್ಯಮ ವಯಸ್ಸಿನವರಿಗೆ ಆರ್ಥಿಕ ವಿಚಾರ ಅಂದರೆ ಮನೆ ಕಟ್ಟುವುದು ಇಂತಹ ಆಕಾಂಕ್ಷೆ ಇದ್ದರೆ, ಪೋಷಕರಿಗೆ ಮಕ್ಕಳ ಏಳಿಗೆ ಮತ್ತು ಮದುವೆ ಮಾಡಬೇಕೆನ್ನುವ ಆಸೆಗಳು ಇರುತ್ತವೆ. ಅಜ್ಜಿ-ತಾತಂದಿರಿಗೆ ಮೊಮಕ್ಕಳ ಆಸೆಗಳಿರುತ್ತವೆ. ಕಾಯಿಲೆಯಿಂದ ನರಳುತ್ತಿರುವವರು ವಾಸಿಯಾಗಲೆಂದು ಬಯಸುತ್ತಿರುತ್ತಾರೆ....