Bangalore, ಮೇ 26 -- ಇಂದು ವಿಜಯ ರಾಘವೇಂದ್ರ ಹುಟ್ಟುಹಬ್ಬ. ಚಿನ್ನಾರಿ ಮುತ್ತಾನೆಂದು ಖ್ಯಾತಿ ಪಡೆದ ಇವರು ಮೇ 26, 1979ರಂದು ಜನಿಸಿದರು. ಅನಿರೀಕ್ಷಿತವಾಗಿ ಅಗಲಿದ ಪತ್ನಿಯ ನೆನಪಿನಲ್ಲಿ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇವರ ಪೋಸ್ಟ್‌ಗೆ ಅಭಿಮಾನಿಗಳು ಕೂಡ ಭಾವುಕರಾಗಿದ್ದಾರೆ.

"ಹ್ಯಾಪಿ ಬರ್ತ್‌ಡೇ ರಾಘು ಸರ್‌ ನೆನಪಿನಲಿ ಸದಾ ಇರುವಿರಿ ಮ್ಯಾಮ್‌" ಎಂದೆಲ್ಲ ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ.

ಚಲಿಸುವ ಮೋಡಗಳು, ಪರಶುರಾಮ್‌, ಅರಲಿದ ಹೂವುಗಳು, ಜಗ ಮೆಚ್ಚಿದ ಹುಡುಗ, ಕೊಲ್ಲೂರು ಶ್ರೀ ಮೂಕಾಂಬಿಕೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ ಬಳಿಕ ಇವರು ಚಿನ್ನಾರಿ ಮುತ್ತಾ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾದ ನಟನೆಯ ಮೂಲಕ ಚಿನ್ನಾರಿ ಮುತ್ತಾನೆಂದು ಇವರು ಖ್ಯಾತಿ ಪಡೆದರು.

ಕೊಟ್ರೆಶಿ ಕನಸು, ಸಂಗೀತ ಸಾಗರ ಜ್ಯಾನಯೋಗಿ ಪಂಚಾಕ್ಷರ ಗವಾಯಿ, ಸ್ವಾಮಿ ವಿವೇಕಾನಂದ, ನಿನಗಾಗಿ, ಪ್ರೇಮಖೈದಿ, ರೋಮಿಯೊ ಜೂಲಿಯೆಟ್‌, ಪ್ರೀತಿಸಲೇಬೇಕು ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ವಿಕ್ರಮ್‌, ಖುಷಿ, ವಿಜಯ ಸಿಂಹ, ರಿಷ...