Bengaluru, ಏಪ್ರಿಲ್ 16 -- ಕನ್ನಡ ಕಿರುತೆರೆ ಮತ್ತು ಸಿನಿಮಾ ಎರಡರಲ್ಲೂ ಗುರುತಿಸಿಕೊಂಡು ಗಮನ ಸೆಳೆದವರು ನಟ ಅಶೋಕ್‌ ಹೆಗಡೆ. ಸಿನಿಮಾಗಳಿಗಿಂತ ಕಿರುತೆರೆಯಲ್ಲಿಯೇ ಹೆಚ್ಚು ಸಕ್ರಿಯರಾಗಿದ್ದ, ಈಗಲೂ ಧಾರಾವಾಹಿಗಳಲ್ಲಿಯೇ ಮುಂದುವರಿಯುತ್ತಿದ್ದಾರವರು. ಸದ್ಯ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ʻದೃಷ್ಟಿಬೊಟ್ಟುʼ ಸೀರಿಯಲ್‌ನಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರೆ ಅಶೋಕ್‌ ಹೆಗಡೆ. ಇಂತಿಪ್ಪ ನಟನ ಬಾಳಲ್ಲಿ ಸಕ್ಕರೆ ಕಾಯಿಲೆ ಘೋರ ದುರಂತವನ್ನೇ ತಂದಿಟ್ಟಿದೆ. ಆಗ ತಾನೆ ಕಣ್ಣು ಬಿಟ್ಟಿದ ಎಳೆ ಕಂದಮ್ಮಗಳನ್ನೇ ಅದು ಬಲಿ ಪಡೆದಿದೆ!

"ನಂಗೆ ಎರಡು ಮಕ್ಕಳಾಗಿದ್ದವು. ಪ್ರಗ್ನೆನ್ಸಿ ಸಮಯದಲ್ಲಿ ನನ್ನ ಹೆಂಡತಿ ಅಂಶು ಹೆಗಡೆಗೆ ಶುಗರ್‌ ಬಂತು. ನನ್ನ ಹೆಂಡತಿಯ ಶುಗರ್‌ ಆ ಮಕ್ಕಳಿಗೂ ಬಂದು, ಆ ಎರಡೂ ಮಕ್ಕಳು ಹಾಗೇ ಸತ್ತವು. ಇದೇ ಹರಿಶ್ಚಂದ್ರ ಘಾಟ್‌ನಲ್ಲಿ ಮಲಕಂಡವೆ. ಮೊದಲ ಮಗು ಹಾಗೇ ಆಯ್ತು. ಎರಡನೇ ಮಗು ಕೂಡ ಹಾಗೇ ಆಯ್ತು. ಮತ್ತೆ ಮಗು ಬೇಡವೇ ಬೇಡ ಅಂತ ನಾವಿಬ್ಬರೂ ನಿರ್ಧಾರ ಮಾಡಿದ್ವಿ. ಯಾಕೆಂದರೆ, ನಾನು ಶೂಟ...