Bangalore, ಏಪ್ರಿಲ್ 22 -- ಬೆಂಗಳೂರು: ಕುಟುಂಬದವರೊಂದಿಗೆ ಪ್ರವಾಸ ಬಂದು ರೆಸಾರ್ಟ್‌ನಲ್ಲಿ ಊಟಕ್ಕೆಂದು ಬಂದಿದ್ದೆವು. ಏಕಾಏಕಿ ಯಾರೂ ನುಗ್ಗಿ ಗುಂಡಿನ ದಾಳಿ ಮಾಡಿದರು. ನಾವು ಇದು ಭದ್ರತಾ ಅಭ್ಯಾಸ ಇರಬೇಕು ಎಂದುಕೊಂಡಿದ್ದೆವು. ಆದರೆ ಅಲ್ಲಿ ಆಗಿದ್ದೇ ಬೇರೆ. ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಮ್ಮ ಮೇಲೆ ದಾಳಿ ಮಾಡಿದರು. ಹಿಂದೂಗಳು ಎಂದು ನಮ್ಮ ಮೇಲೆಯೂ ದಾಳಿ ಮಾಡಲು ಮುಂದಾದರು. ನನ್ನ ಪತಿಯ ಮೇಲೆ ಗುಂಡು ಹಾರಿಸಿದರು. ಅಲ್ಲಲ್ಲಿ ಕುಳಿತಿದ್ದವರ ಮೇಲೆ ಕೆಲವೇ ಕ್ಷಣಗಳಲ್ಲಿ ದಾಳಿಯಾಗಿ ನೆಲಕ್ಕುರುಳಿಸಿ ಪರಾರಿಯಾದರು. ಆಗ ನನ್ನನ್ನು ಗುಂಡಿಕ್ಕಿ ಕೊಂದು ಹಾಕಿ ಬಿಡಿ ಎಂದು ಅಲ್ಲಿದ್ದ ಉಗ್ರರಿಗೆ ದಿಟ್ಟವಾಗಿಯೇ ಹೇಳಿದೆ. ನಿಜಕ್ಕೂ ಇದೊಂದು ಘೋರ ದುರಂತ.

ಶಿವಮೊಗ್ಗ ಮೂಲದ ರಿಯಲ್‌ ಎಸ್ಟೇಟ್‌ ಉದ್ಯಮಿ ಮಂಜುನಾಥರಾವ್‌ ಅವರನ್ನು ಕಳೆದುಕೊಂಡ ಅವರ ಪತ್ನಿ ಪಲ್ಲವಿ ಅವರು ಕಾಶ್ಮೀರದ ಫಹಲಗಾಂವ್‌ನಲ್ಲಿ ನಡೆದ ಘಟನೆಯನ್ನು ವಿವರಿಸುತ್ತಲೇ ಕಣ್ಣೀರಾಗಿದ್ದು ಹೀಗೆ. ಅಲ್ಲಿನ ಘಟನೆಯನ್ನು ಮಾಧ್ಯಮಗಳಿಗೆ ಅವರು ಬಿಡಿಸಿಟ್ಟರು. ಅವರನ್ನೂ ...