Bangalore, ಮೇ 27 -- ಕನ್ನಡದ ಪ್ರತಿಭಾನ್ವಿತ ಕಿರುತೆರೆ ನಟ ಶ್ರೀಧರ್‌ ನಾಯ್ಕ್‌ ನಿಧನರಾಗಿದ್ದಾರೆ. ಕಳೆದ ತಿಂಗಳು ಇವರ ಆರೋಗ್ಯ ಸ್ಥಿತಿಯ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿ ವೈರಲ್‌ ಆಗಿತ್ತು. ಹೇಗಿದ್ದ ನಟ ಹೇಗಾದ ಎಂದು ಇವರ ಕೃಶವಾದ ಫೋಟೋಗಳು ವೈರಲ್‌ ಆಗಿದ್ದವು. ರಂಗಭೂಮಿಯಿಂದ ಸಿನಿಮಾ, ಸೀರಿಯಲ್‌ ಕ್ಷೇತ್ರಕ್ಕೆ ಆಗಮಿಸಿದ್ದ ಇವರು ಪ್ರತಿಭಾನ್ವಿತ ನಟರಾಗಿದ್ದರು.

ಇದೀಗ ನಟ ಶ್ರೀಧರ್‌ ನಾಯ್ಕ್‌ ಅವರ ನಿಧನ ವಾರ್ತೆ ಬಂದಿದೆ. ಆಸ್ಪತ್ರೆಯಲ್ಲಿ ಪ್ರತಿನಿತ್ಯ ಹಲವು ಸಾವಿರ ರೂಪಾಯಿ ಖರ್ಚು ಮಾಡಿದರೂ ಇವರನ್ನು ಉಳಿಸಲಾಗದ ನೋವಿನಲ್ಲಿ ನಟನ ಆಪ್ತರು, ಬಂಧು ಬಳಗವಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಜನರು ಕಂಬನಿ ಮಿಡಿಯುತ್ತಿದ್ದಾರೆ.

ಸಿನಿಮಾ ಮತ್ತು ಸೀರಿಯಲ್‌ ಕ್ಷೇತ್ರಕ್ಕೆ ಹೇಳಿ ಮಾಡಿಸಿದಂತೆ ಸುರಸುಂದರಾಂಗನಂತೆ ಇದ್ದ ಈ ಪ್ರತಿಭಾನ್ವಿತ ಕಲಾವಿದನ ದೇಹ ಊದಿಕೊಳ್ಳಲು ಆರಂಭಿಸಿದ ಬಳಿಕ ಸಂಪೂರ್ಣ ಬದಲಾಗಿತ್ತು. ಬೆಂಗಳೂರಿನ ಬ್ಯಾಪಿಸ್ಟ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಮಯದಲ್ಲಿ ಗುರುತೇ ಸಿಗದಂತ...