ಭಾರತ, ಮೇ 3 -- ವಿಜಯಪುರ: ವಿಜಯಪುರ ರಾಜಕೀಯ ಹೊಡೆತ, ಮಾತಿನ ಏಟುಗಳಿಗೆ ಹೆಸರುವಾಸಿಯಾದ ಜಿಲ್ಲೆ. ಹಿಂದಿನಿಂದಲೂ ಇರುವ ಪಾಟೀಲರ ಪಾರುಪತ್ಯದ ಪರಂಪರೆ ಈಗಲೂ ಮುಂದುವರಿದಿದೆ. ಮೂರೂವರೆ ದಶಕದಿಂದಲೂ ಸಕ್ರಿಯ ರಾಜಕಾರಣದಲ್ಲಿರುವ ಕಾಂಗ್ರೆಸ್‌ನ ಹಾಲಿ ಸಚಿವ ಶಿವಾನಂದ ಪಾಟೀಲ್, ಮಾಜಿ ಸಚಿವ ಹಾಗೂ ಸದ್ಯ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ಶಾಸಕ ಸ್ಥಾನದ ರಾಜೀನಾಮೆ ಸವಾಲ್ ಜವಾಬ್ ಜೋರಾಗಿದೆ. ಶಿವಾನಂದ ಪಾಟೀಲರು ಅಪ್ಪನಿಗೆ ಹುಟ್ಟಿದ್ದರೆ ಶುಕ್ರವಾರದೊಳಗೆ ರಾಜೀನಾಮೆ ಕೊಡಲಿ ಎಂದು ಯತ್ನಾಳ್ ಸವಾಲು ಹನಾಕಿದ್ದರು. ನಾನು ರಾಜೀನಾಮೆ ಕೊಟ್ಟಾಯ್ತು, ನೀವು ಯಾವಾಗ ಕೊಡ್ತೀರಿ ಹೇಳಿ ಎಂದು ಶಿವಾನಂದ ಪಾಟೀಲರು ಮರು ಸವಾಲು ಹಾಕಿ ಆಯಿತು. ಈಗ ಅದಕ್ಕೆ ತಿರುಗೇಟು ಕೊಟ್ಟಿರುವ ಯತ್ನಾಳ್ ಪಾಟೀಲರು, ರಾಜೀನಾಮೆ ಅಂಗೀಕಾರ ಆದರೆ ಕೊಡುವೆ ಎಂದು ನಾನು ಹೇಳಿದ್ದೆ. ಅವರು ಕೊಟ್ಟಿರುವ ರಾಜೀನಾಮೆ ರೀತಿಯೇ ಸರಿಯಿಲ್ಲ. ಇದೊಂದು ನಾಟಕ ಎಂದು ಹೇಳಿದ್ದಾರೆ. ಇದರ ನಡುವೆ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.