ಭಾರತ, ಮಾರ್ಚ್ 16 -- ಬೆಂಗಳೂರು: ದುಬೈನಿಂದ ಬೆಂಗಳೂರಿಗೆ ಮರಳಿದಾಗ ನನ್ನ ಬಳಿ ಒಂದಿಷ್ಟೂ ಚಿನ್ನವೇ ಇರಲಿಲ್ಲ. ಡಿಆರ್‌ಐ ಅಧಿಕಾರಿಗಳು ವಶಪಡಿಸಿಕೊಂಡೂ ಇಲ್ಲ. ವಿನಾಕಾರಣ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನನ್ನ ತಂದೆ ಐಪಿಎಸ್‌ ಅಧಿಕಾರಿಗೂ ಈ ವ್ಯವಹಾರಕ್ಕೂ ಯಾವುದೇ ಸಂಬಂಧ ಇಲ್ಲ. ಆದರೂ ನನ್ನನ್ನು ಬೆದರಿಸಿ ಚಿನ್ನ ಕಳ್ಳ ಸಾಗಣೆ ಮಾಡಿದ್ದೇನೆ ಎಂದು 50-60 ಪುಟಗಳ ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿಸಿಕೊಂಡಿದ್ದಾರೆ ಎಂದು ರನ್ಯಾ ರಾವ್‌ ರೆವಿನ್ಯೂ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ತನಿಖಾಧಿಕಾರಿಗಳ ವಿರುದ್ಧವೇ ದೂರು ನೀಡಿದ್ದಾರೆ.

ರನ್ಯಾ ರಾವ್‌ ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಆಕೆ ಅಲ್ಲಿಂದಲೇ ಕಾರಾಗೃಹದ ಮುಖ್ಯ ಅಧೀಕ್ಷಕ ಕೆ.ಸುರೇಶ್ ಮೂಲಕ ಡಿಆರ್‌ಐ ಹೆಚ್ಚುವರಿ ನಿರ್ದೇಶಕರಿಗೆ ಮಾರ್ಚ್‌ 6ರಂದು ಬರೆದಿರುವ ಪತ್ರದಲ್ಲಿ ತನಿಖಾಧಿಕಾರಿಗಳ ವಿರುದ್ಧ ಆಪಾದನೆಗಳನ್ನು ಮಾಡಿದ್ದಾರೆ. ವಿಶೇಷ ಎಂದರೆ ಮಾರ್ಚ್ 9ರಂದು ರನ್ಯಾ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಅಧಿಕಾರಿಗಳು ಹಿಂಸ...