ಭಾರತ, ಏಪ್ರಿಲ್ 9 -- ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದೆಯೂ ಹೆಚ್ಚಾಗಬಹುದಾದ ಕೊಲೆಸ್ಟ್ರಾಲ್, ಗಂಭೀರವಾದ ಪೆರಿಫೆರಲ್ ಆರ್ಟರಿ ಡಿಸೀಸ್‍ಗೆ ಕಾರಣವಾಗುತ್ತದೆ. ಹೆಚ್ಚಾಗಿ ನಡೆಯುವುದರಿಂದ ಕಾಲು ನೋವು ಅಥವಾ ಅಸ್ವಸ್ಥತೆ ಉಂಟಾಗುವುದು, ಸ್ನಾಯುಗಳ ದುರ್ಬಲತೆ, ಪಾದವು ಕೋಲ್ಡ್ ಆಗುವುದು, ಮರಗಟ್ಟುವಿಕೆ ಅಥವಾ ಜುಮ್ಮೆನಿಸುವ ಲಕ್ಷಣಗಳು ನಿಧಾನವಾಗಿ ಗೋಚರಿಸುತ್ತದೆ. ನಿಯತವಾಗಿ ತಪಾಸಣೆ ಮಾಡುವುದು, ಆರೋಗ್ಯಕರ ಡಯಟ್ ಮತ್ತು ನಿರಂತರವಾಗಿ ವ್ಯಾಯಾಮ ಮಾಡುವುದರಿಂದ ಈ ಅಪಾಯವನ್ನು ತಡೆಗಟ್ಟಬಹುದು.

ಕಾಲು ನೋವು ಅಥವಾ ಅಸ್ವಸ್ಥತೆ: ಕೊಲೆಸ್ಟ್ರಾಲ್‌ನ ಪ್ರಮುಖ ಲಕ್ಷಣವೆಂದರೆ ಪೆರಿಫೆರಲ್ ಆರ್ಟರಿ ಡಿಸೀಸ್ (PAD) ನಿಂದ ಉಂಟಾಗುವ ಕಾಲು ನೋವು. ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾದಾಗ ಅದು ಕುಗ್ಗಿ, ಆಮ್ಲಜನಕದ ಪೂರೈಕೆಯು ಸರಿಯಾಗಿ ಆಗದು. ಇದರಿಂದ ನೋವು, ನಿಶ್ಯಕ್ತಿ, ಆಯಾಸ ಮತ್ತು ಬಳಲಿಕೆಯಂತಹ ಲಕ್ಷಣಗಳು ಕಂಡುಬರುತ್ತದೆ. ನಡೆಯುವಾಗ ಮತ್ತು ಮೆಟ್ಟಿಲುಗಳನ್ನು ಹತ್ತುವಾಗ ತೊಡೆಸಂದಿ, ಪೃಷ್ಠದಲ್ಲಿ ನೋವು ಕಂಡುಬರಬಹುದು.

ಸ್ನಾಯುಗಳ...