Bangalore, ಮಾರ್ಚ್ 12 -- ನಾವು ಇನ್ನು ಯಾರನ್ನೂ ಅನುಸರಿಸುವುದಿಲ್ಲ. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ದೃಢ ನಿರ್ಧಾರ ತೆಗೆದುಕೊಂಡಿದ್ದಾರೆ. ಹೌದು, ಇನ್‌ಸ್ಟಾಗ್ರಾಂನಲ್ಲಿ ಈ ಹಿಂದೆ ತಾವು ಅನುಸರಿಸುತ್ತಿದ್ದವರನ್ನು ದೂರವಿಟ್ಟಿದ್ದಾರೆ. ಈಗ ವಿಜಯಲಕ್ಷ್ಮಿ ಮತ್ತು ದರ್ಶನ್‌ ಅವರು ಇನ್‌ಸ್ಟಾಗ್ರಾಂನಲ್ಲಿ ಯಾರನ್ನೂ ಫಾಲೋ ಮಾಡುತ್ತಿಲ್ಲ. ತಮ್ಮ ಆಪ್ತರಾದ ಸುಮಲತಾ ಅಂಬರೀಶ್‌, ಅಭಿಷೇಕ್‌ ಅಂಬರೀಶ್‌ ಮಾತ್ರವಲ್ಲ ತಮ್ಮ ಸ್ವಂತ ಮಗ ವಿನೀಶ್‌ನನ್ನೂ ಇನ್‌ಸ್ಟಾಗ್ರಾಂನಲ್ಲಿ ಇವರಿಬ್ಬರು ಫಾಲೋ ಮಾಡುತ್ತಿಲ್ಲ. ಈ ಹೊಸ ಬೆಳವಣಿಗೆ ಕುರಿತು "ಅಭಿಷೇಕ್‌ ಅಂಬರೀಶ್‌ ಮತ್ತು ದರ್ಶನ್‌ ದೂರವಾದ್ರ, ತಾಯಿ ಸಮಾನ ಸುಮಲತಾ ಅಂಬರೀಶ್‌ಗೂ ದರ್ಶನ್‌ಗೂ ಮೊದಲಿನ ಆತ್ಮೀಯತೆ ಇಲ್ವ" ಎಂದೆಲ್ಲ ಸುದ್ದಿಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಆದರೆ, ಇದು ದರ್ಶನ್‌ ಮತ್ತು ವಿಜಯಲಕ್ಷ್ಮಿ ಅವರಿಂದ ಕೇವಲ ಸೋಷಿಯಲ್‌ ಮೀಡಿಯಾ ಕ್ಲೀನಿಂಗ್‌ ಅಭಿಯಾನ, ಬೇರೆ ಏನು ಇಲ್ಲ ಎನ್ನಲಾಗುತ್ತಿದೆ.

ದರ್ಶನ್‌ ಮತ್ತು ವಿಜ...