Bangalore, ಮಾರ್ಚ್ 29 -- ಹೌದು, ಕನ್ನಡ ನಟ ಡಾರ್ಲಿಂಗ್ ಕೃಷ್ಣ ಈಗ "ಡಾರ್ಲಿಂಗ್‌" ಇಮೇಜ್‌ನಿಂದ ಹೊರಬರುವ ಪ್ರಯತ್ನದಲ್ಲಿದ್ದಾರೆ. ಬ್ರ್ಯಾಟ್‌ ಎಂಬ ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಪ್ರತಿಭಾನ್ವಿತ ನಿರ್ದೇಶಕ ಶಶಾಂಕ್‌ ಅವರು ಬ್ರ್ಯಾಟ್‌ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ನಿರ್ದೇಶಕ ಶಶಾಂಕ್‌ ಅವರು ಈ ಹಿಂದೆ ಡಾರ್ಲಿಂಗ್‌ ಕೃಷ್ಣ ನಾಯಕನಾಗಿರುವ ಕೌಶಲ್ಯ ಸುಪ್ರಜಾ ರಾಮ ಎಂಬ ಸಿನಿಮಾ ನಿರ್ದೇಶಿಸಿದ್ದರು. ಇದೀಗ ಇವರು ಬ್ರ್ಯಾಟ್‌ ಎಂಬ ಸಿನಿಮಾದ ಮೂಲಕ ಮತ್ತೆ ಒಂದಾಗಿದ್ದಾರೆ. ಮಾರ್ಚ್‌ 28ರಂದು ಈ ಸಿನಿಮಾದ ಕುರಿತು ಮಾಹಿತಿ ನೀಡಲಾಗಿದೆ. ವಿಡಿಯೋ ಸಾಂಗ್‌ ಕೂಡ ರಿಲೀಸ್‌ ಆಗಿದೆ

ಶಶಾಂಕ್‌ ಮತ್ತು ಡಾರ್ಲಿಂಗ್‌ ಕೃಷ್ಣ ಈಗಾಗಲೇ ಈ ಸಿನಿಮಾದ ಕೆಲಸ ಸದ್ದಿಲ್ಲದೆ ಮಾಡುತ್ತಿದ್ದಾರೆ. ಸಿನಿಮಾದ ಶೇಕಡ 80ರಷ್ಟು ಭಾಗ ಪೂರ್ಣಗೊಂಡಿದೆಯಂತೆ. ಶೀಘ್ರದಲ್ಲಿ ಈ ಸಿನಿಮಾ ಬಿಡುಗಡೆಯಾಗುವ ಸೂಚನೆಯಿದೆ. ಅಂದರೆ, ಕೆಲವೇ ತಿಂಗಳಲ್ಲಿ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.

ಕೌಸಲ್ಯ ಸುಪ್ರಜಾ ರಾ...