ಭಾರತ, ಏಪ್ರಿಲ್ 11 -- ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್​ 2: ಪ್ರತಿವೀಕೆಂಡ್‌ನಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ಕಾರ್ಯಕ್ರಮ ನಡೆಯುತ್ತದೆ. ಈ ರಿಯಾಲಿಟಿ ಶೋನಲ್ಲಿ ಹತ್ತು ಬ್ಯಾಚುಲರ್ಸ್‌ಗಳು ತಮ್ಮ ಪ್ರತಿಭೆ ಪ್ರದರ್ಶನ ಮಾಡುತ್ತಾರೆ. ಈ ಸಮಯದಲ್ಲಿ ಇವರಿಗೆ ಬೆಂಬಲ ನೀಡಲು ಹತ್ತು ಮೆಂಟರ್ಸ್‌ ಕೂಡ ಇರುತ್ತಾರೆ. ಈ ವಾರ ಈ ರಿಯಾಲಿಟಿ ಶೋನಲ್ಲಿ ಲವ್‌ ಕೆಮಿಸ್ಟ್ರಿ ರೌಂಡ್‌ ಚಾಲೆಂಜ್‌ ನೀಡಲಾಗಿದೆ. ಬ್ಯಾಚುಲರ್ಸ್ ಮತ್ತು ಏಂಜಲ್ಸ್ ನಡುವೆ ನಡೆಯುವ ಈ ಟಾಸ್ಕ್‌ ಸಖತ್‌ ಕುತೂಹಲ ಕೆರಳಿಸಿದೆ. ಇದೇ ಸಮಯದಲ್ಲಿ ಈ ವೇದಿಕೆಗೆ ವಿದ್ಯಾಪತಿ ಸಿನಿಮಾ ತಂಡದ ನಾಗಭೂಷಣ, ಡಾಲಿ ಧನಂಜಯ್‌ ಮುಂತಾದವರು ಬಂದಿದ್ದಾರೆ. ಹೀಗಾಗಿ, ಈ ವಾರ ಭರ್ಜರಿ ಬ್ಯಾಚುಲರ್ಸ್‌ ವೇದಿಕೆಯಲ್ಲಿ ವೀಕ್ಷಕರಿಗೆ ಡಬಲ್‌ ಧಮಾಕ ಇರಲಿದೆ.

ಈ ವಾರ ಚಿತ್ರಮಂದಿರಗಳಲ್ಲಿ ವಿದ್ಯಾಪತಿ ಸಿನಿಮಾ ರಿಲೀಸ್‌ ಆಗಿದೆ. ಈ ಚಿತ್ರದ ಕುರಿತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಇದೇ ಸಮಯದಲ್ಲಿ ಚಿತ್ರದ ಪ್ರಮೋಷನ್‌ಗಾಗಿ ಜೀ ಕನ್ನಡ ವ...