ಭಾರತ, ಏಪ್ರಿಲ್ 7 -- Sreeleela Viral Video: ಕಿಸ್‌ ಸಿನಿಮಾ ನಟಿ ಶ್ರೀಲೀಲಾ ಟಾಲಿವುಡ್‌ ಬಳಿಕ ಈಗ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಸದ್ಯ ಜನರು ಹಿಂದಿ ಸಿನಿಮಾವೊಂದರ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಜೊತೆ ತೆರೆ ಹಂಚಿಕೊಳ್ಳಲಿರುವ ಶ್ರೀಲೀಲಾ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಇದೀಗ ಶ್ರೀಲೀಲಾಗೆ ಸಂಬಂಧಿಸಿದ ಶಾಕಿಂಗ್ ವಿಡಿಯೊವೊಂದು ವೈರಲ್ ಆಗಿದೆ. ಈ ವಿಡಿಯೊ ನೋಡಿದ ಜನರು ಇಂತಹ ದೌರ್ಜನ್ಯಗಳು ನಿಲ್ಲಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಹಾಗಾದರೆ ವಿಡಿಯೊದಲ್ಲಿ ಅಂಥದ್ದೇನಿದೆ ನೋಡಿ.

ಶೂಟಿಂಗ್ ಮುಗಿಸಿ ನಟ ಕಾರ್ತಿಕ್ ಆರ್ಯನ್ ಜೊತೆ ಶ್ರೀಲೀಲಾ ಜನಜಂಗುಳಿ ಇರುವ ಜಾಗದಲ್ಲಿ ನಡೆದು ಬರುತ್ತಿರುತ್ತಾರೆ. ಆ ಸಂದರ್ಭ ಕೆಲವರು ಅವರನ್ನು ಬಲವಂತವಾಗಿ ಎಳೆದಾಡಿದ್ದಾರೆ. ಬಾಡಿಗಾರ್ಡ್‌, ಕಾರ್ತಿಕ್‌ ಆರ್ಯನ್ ಜೊತೆ ಇರುವಾಗಲೇ ಶ್ರೀಲೀಲಾಗೆ ಈ ರೀತಿ ಅನುಭವವಾಗಿದೆ. ಪಾಪರಾಜಿಗಳು ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದು, ಸಾಕಷ್ಟು ವೈರಲ್ ಆಗಿದೆ. ಮಾತ್...