Bengaluru, ಮಾರ್ಚ್ 2 -- Vinod Raj: ಸ್ಯಾಂಡಲ್‌ವುಡ್‌ ಕಂಡ ಖ್ಯಾತ ನಟಿಯರಲ್ಲಿ ಲೀಲಾವತಿ ಸಹ ಒಬ್ಬರು. ತಮ್ಮ ಅಪ್ರತಿಮ ನಟನೆಯ ಮೂಲಕವೇ ಕನ್ನಡಿಗರ ಮನದಲ್ಲಿ ಹಸಿರಾಗಿದ್ದಾರೆ. ಸಿಕ್ಕ ಪಾತ್ರವನ್ನು ಲೀಲಾಜಾಲವಾಗಿ ನಿಭಾಯಿಸಿ, ಜನಮನ್ನಣೆಯನ್ನೂ ಗಳಿಸಿದ್ದಾರೆ. ಇಂತಿಪ್ಪ ಲೀಲಾವತಿ ಮತ್ತವರ ಪುತ್ರ ವಿನೋದ್‌ ರಾಜ್‌ ಬರೀ ಸಿನಿಮಾ ಮಾತ್ರವಲ್ಲದೆ, ಒಂದಷ್ಟು ವಿವಾದಗಳಿಂದಲೂ ಮುನ್ನೆಲೆಗೆ ಬಂದಿದ್ದರು. ಅದರಲ್ಲೂ ಡಾ. ರಾಜ್‌ಕುಮಾರ್‌ ಅವರ ಕುರಿತೇ ಹೆಚ್ಚು ಸುದ್ದಿಯಾಗಿದ್ದರು. ಇದೀಗ ಇದೇ ಲೀಲಾವತಿ ಮತ್ತು ವಿನೋದ್‌ ರಾಜ್‌ ಬಗ್ಗೆ ಅಖಿಲ ಕರ್ನಾಟಕ ಡಾ. ರಾಜ್‌ಕುಮಾರ್‌ ಅಭಿಮಾನಿ ಸಂಘಗಳ ಒಕ್ಕೂಟದ ರಾಜ್ಯ ಗೌರವಾಧ್ಯಕ್ಷ ಎನ್‌ ಆರ್‌ ರಮೇಶ್‌ ಒಂದಷ್ಟು ವಿಚಾರಗಳನ್ನು ದಾಖಲೆ ಸಮೇತ ಬಿಚ್ಚಿಟ್ಟಿದ್ದಾರೆ. ನೆಲಮಂಗಲದ ಸೋಲದೇವನಹಳ್ಳಿಯಲ್ಲಿನ ವಿನೋದ್‌ ರಾಜ್‌ ಅವರ ಜಮೀನು ನಿತ್ಯಾನಂದನ ಆಶ್ರಮದಂತೆ ಪರಿವರ್ತನೆಯಾಗುತ್ತಿದೆ ಎಂದು ಎನ್‌.ಆರ್‌ ರಮೇಶ್‌ ಆರೋಪಿಸಿದ್ದಾರೆ.

ಕಳೆದ ಕೆಲ ವರ್ಷಗಳಿಂದ ವಿನೋದ್‌ ರಾಜ್‌ ಅವರ ಹುಟ್ಟಿನ ವಿಚಾರವಾಗಿ ಸ...