Bangalore, ಮಾರ್ಚ್ 5 -- ಬೆಂಗಳೂರು: ಚಿನ್ನದ ಅಕ್ರಮ ಸಾಗಾಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್‌ ಫ್ಲಾಟ್‌ ಮೇಲೂ ಡಿಆರ್‌ಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಮಾಣಿಕ್ಯ ನಟಿಯ ಫ್ಲಾಟ್‌ನಲ್ಲೂ ಹಲವು ಕೋಟಿ ರೂಪಾಯಿ ಮೌಲ್ಯದ ಚಿನ್ನ ದೊರಕಿದ್ದು, ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದೇ ಸಮಯದಲ್ಲಿ ಈಕೆ ವಾಸಿಸುವ ಫ್ಲಾಟ್‌ನ ಕುರಿತಾದ ಅಚ್ಚರಿಯ ವಿಷಯಗಳೂ ಬಹಿರಂಗವಾಗಿದೆ. ಈಕೆ ತಿಂಗಳಿಗೆ ಈ ಫ್ಲಾಟ್‌ಗೆ 4.5 ಲಕ್ಷ ರೂ ಬಾಡಿಗೆ ನೀಡುತ್ತಿದ್ದಳು ಎಂದು ವರದಿಗಳು ತಿಳಿಸಿವೆ.

ಬೆಂಗಳೂರಿನ ಲ್ಯಾವೆಲ್ಲಿ ರಸ್ತೆಯ ಫ್ಲಾಟ್‌ನಲ್ಲಿ 2.06 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ನಿನ್ನೆ ರಾತ್ರಿ ಅಧಿಕಾರಿಗಳು 2.67 ಕೋಟಿ ರೂಪಾಯಿ ಹಣವನ್ನೂ ವಶಕ್ಕೆ ಪಡೆದಿದ್ದರು. ಆಗಾಗ ಈಕೆ ದುಬೈಗೆ ಹೋಗಿ ಬರುತ್ತಿದ್ದರು. ಆದರೆ, ಈ ಬಾರಿ ಮಾತ್ರ ಡಿಆರ್‌ಐ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾಳೆ. ಬೆಂಗಳೂರಿನ ನಂದವಾಣಿ ಮ್ಯಾನ್ಸನ್‌ನಲ್ಲಿ ಪ್ರತಿತಿಂಗಳು 4.5 ಲಕ್ಷ ರೂ...