Bangalore, ಮೇ 16 -- ಛಾಯಾ ಸಿಂಗ್‌ಗೆ ವಯಸ್ಸೆಷ್ಟು?: 1981ರ ಮೇ 16ರಂದು ಜನಿಸಿದ ನಟಿ ಛಾಯಾ ಸಿಂಗ್‌ಗೆ ಈಗ 46 ವರ್ಷ ವಯಸ್ಸು ಎಂದರೆ ಯಾರೂ ನಂಬಲಿಕ್ಕಿಲ್ಲ. ಹೌದು, ಈಗಲೂ 20ರ ಹರೆಯದ ಸುಂದರಿಯರನ್ನು ನಾಚಿಸುವಂತೆ ಕಾಣಿಸುವ ನಟಿಗೆ 46 ವರ್ಷ ವಯಸ್ಸಾಗಿದೆ.

ಅಮೃತಧಾರೆ ಸೀರಿಯಲ್‌ನಲ್ಲಿ ಶಕುಂತಲಾದೇವಿ ಹುಟ್ಟುಹಬ್ಬದ ಕಾರ್ಯಕ್ರಮ ನಡೆಯುತ್ತಿದೆ.‌ ಆದರೆ, ಹೊರಜಗತ್ತಿನಲ್ಲಿ ಇಂದು ಭೂಮಿಕಾ ಪಾತ್ರಧಾರಿ ಛಾಯಾ ಸಿಂಗ್‌ ಹುಟ್ಟುಹಬ್ಬ.

ಜೀ ಕನ್ನಡ ವಾಹಿನಿ ಹಂಚಿಕೊಂಡ ವಿಡಿಯೋ ಆಕರ್ಷಕವಾಗಿದೆ. "ಪ್ರತಿಯೊಬ್ಬರ ಜೀವನದಲ್ಲಿ ಒಬ್ಬ ಸಂಗಾತಿ ಬಂದೇ ಬರುತ್ತಾನೆ. ಅವರು ಹೇಗೆ ಇದ್ದರೂ ಹಾಗೆಯೇ ಒಪ್ಪಿಕೊಂಡರೆ ಗಾಢವಾಗಿ ಪ್ರೀತಿಸ್ತಾರೆ" ಎಂದು ಭೂಮಿಕಾಳ ಧ್ವನಿ ಈ ವಿಡಿಯೋದಲ್ಲಿ ಕೇಳಿಸುತ್ತದೆ.

ಹೀಗೆ ಆರಂಭವಾಗುವ ವಿಡಿಯೋ ಬಳಿಕ ಛಾಯಾ ಸಿಂಗ್‌ ಅವರ ಅಮೃತಧಾರೆ ಧಾರಾವಾಹಿಯ ಜರ್ನಿಯ ಝಲಕ್‌ಗಳನ್ನು ತೋರಿಸಿದೆ.

ರವಿಚಂದ್ರನ್‌ ಅವರಿಂದ ಜೀ ಕನ್ನಡ ಕುಟುಂಬ ಅವಾರ್ಡ್‌ ಪಡೆಯುವ ಕ್ಷಣಗಳನ್ನೂ ಈ ವಿಡಿಯೋ ತೋರಿಸಿದೆ.

'ಅಮೃತಧಾರೆ' ಧಾರಾವಾಹಿಯ ...