ಭಾರತ, ಮಾರ್ಚ್ 7 -- ಸ್ಯಾಂಡಲ್‌ವುಡ್‌ನಲ್ಲಿ ನಟರಿಗೆ ಹೋಲಿಸಿದರೆ ನಟಿಯರಿಗೆ ಕಡಿಮೆ ವೇತನ ನೀಡಲಾಗುತ್ತಿದೆ ಎಂದು ನಟಿ ರಮ್ಯಾ ಹೇಳಿದ್ದಾರೆ. ಕನ್ನಡ ಸಿನಿಮಾರಂಗದಲ್ಲಿ ಮಹಿಳೆ ಮತ್ತು ಪುರುಷರಿಗೆ ಸಂಭಾವನೆಯಲ್ಲಿ ತಾರತಮ್ಯ ಮಾಡಲಾಗುತ್ತದೆ. ಇಲ್ಲಿ ನಟಿಯರಿಗೆ ಸಾಕಷ್ಟು ಸಮಸ್ಯೆಗಳು ಇವೆ. ಇಲ್ಲಿನ ತೊಂದರೆಗಳ ಕುರಿತು ಯಾರೂ ಧೈರ್ಯವಾಗಿ ಬಾಯಿಬಿಡುವ ಧೈರ್ಯ ಮಾಡುತ್ತಿಲ್ಲ ಎಂದು ರಾಜಕಾರಣಿಯಾಗಿ ಬದಲಾಗಿರುವ ನಟಿ ರಮ್ಯಾ ಹೇಳಿದ್ದಾರೆ. ಅವರು ನಿನ್ನೆ (ಗುರುವಾರ) ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ "ಮಹಿಳೆ ಹಾಗ ಸಿನಿಮಾ" ಎಂಬ ಗೋಷ್ಠಿಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಒಂದು ಸಿನಿಮಾ ಸಕ್ಸಸ್‌ ಪಡೆದ ಬಳಿಕ ನಾಯಕ ನಟರು ತಮ್ಮ ಸಂಭಾವನೆಯನ್ನು ಶೇಕಡ 50ರಷ್ಟು ಹೆಚ್ಚಿಸಿಕೊಳ್ಳುತ್ತಾರೆ. ಆದರೆ, ಕಲಾವಿದೆಯರ ಸಂಭಾವನೆ ಶೇಕಡ 5ರಷ್ಟು ಹೆಚ್ಚುತ್ತದೆ ಅಷ್ಟೇ. ನನ್ನ ಜತೆ ಆರಂಭದಲ್ಲಿ ಸಿನಿಮಾ ಮಾಡುತ್ತಿದ್ದ ನಟರು ನನಗಿಂತ ಕಡಿಮೆ ಸಂಭಾವನೆ ಪಡೆಯುತ್ತಿದ್ದರು. ನನ್ನ ಜತೆ ಕೆಲಸ ಮಾಡುತ್ತಿದ್ದ ಅನೇಕರು ಸೂಪರ್‌ಸ್...