ಭಾರತ, ಏಪ್ರಿಲ್ 7 -- Asiya Firdose Interview: 'ಸುಬ್ಬು, ಸುಬ್ಬು' ಎನ್ನುತ್ತಲೇ ಕನ್ನಡಿಗರ ಮನಸ್ಸಿಗೆ ಸಾಕಷ್ಟು ಹತ್ತಿರವಾದ ಹುಡುಗಿ ಜೀ ಕನ್ನಡದ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ನಾಯಕಿ ಶ್ರಾವಣಿ ಅಲಿಯಾಸ್ ಆಸಿಯಾ ಫಿರ್ಡೋಸ್‌. ಮುದ್ದಾದ ನೋಟ ಹಾಗೂ ನಟನೆಯಿಂದ ಗಮನ ಸೆಳೆವ ಸುಂದರಿ ಈಕೆ. ಆರಂಭದಿಂದಲೂ ತನ್ನ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ ಶ್ರಾವಣಿ.

ಶ್ರಾವಣಿ ಅಲಿಯಾಸ್ ಆಸಿಯಾಗೆ ಇದು ಮೊದಲ ಧಾರಾವಾಹಿ ಏನಲ್ಲ. ಈ ಹಿಂದೆ ಅವರು 'ಕನ್ಯಾಕುಮಾರಿ' ಎನ್ನುವ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದರು. ಪ್ರೀತು ರಾಜು ಹಳದಳ್ಳಿ ನಿರ್ದೇಶನದ ಈ ಧಾರಾವಾಹಿ ಮೂಲಕ ಶ್ರಾವಣಿ ತಮ್ಮ ನಟನೆಯ ಪಯಣವನ್ನು ಆರಂಭ ಮಾಡುತ್ತಾರೆ. ಎಂತ ಪಾತ್ರಕ್ಕೂಸೈ ಎನ್ನುವಂತಿರುವ ಶ್ರಾವಣಿಗೆ ಸಿನಿಮಾಗಳಿಂದಲೂ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಸದ್ಯ ಅವರ ಕೈಯಲ್ಲಿ 3 ಸಿನಿಮಾಗಳಿವೆ. ಆಶಾ, ಗಗನಸಖಿ ಮಿಸ್ಸಿಂಗ್ ಹಾಗೂ ದ್ವಂಧ್ವ ಸಿನಿಮಾಗಳಿಗೆ ಈಕೆಯೇ ನಾಯಕಿ.

ಕನ್ಯಾಕುಮಾರಿ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದ ಇವರು ಒಂ...