ಭಾರತ, ಏಪ್ರಿಲ್ 9 -- ಭಾಗ್ಯಲಕ್ಷ್ಮೀ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಟಾಪ್ ಧಾರಾವಾಹಿಗಳಲ್ಲಿ ಒಂದು. ಇದರಲ್ಲಿ ನಾಯಕಿ ಭಾಗ್ಯಳ ಮಕ್ಕಳಾಗಿ ನಟಿಸುತ್ತಿರುವ ತನ್ವಿ, ಗುಂಡಣ್ಣ ಹಲವರಿಗೆ ಫೇವರಿಟ್‌. ಅಪ್ಪನ ಮುದ್ದಿನ ಮಗಳು ತನ್ವಿಗೆ ಮೊದಲು ಅಮ್ಮನೆಂದರೆ ಅಷ್ಟಕಷ್ಟೇ, ಆದರೆ ಇತ್ತೀಚಗೆ ಆಕೆ ಬದಲಾಗಿದ್ದಾಳೆ. ಅಮ್ಮ ಮೇಲೂ ಪ್ರೀತಿ ತೋರಿಸಲು ಆರಂಭಿಸಿದ್ದಾಳೆ.

ತನ್ವಿ ಪಾತ್ರದ ಮೂಲಕ ಕರುನಾಡಿಗೆ ಹತ್ತಿರವಾಗಿರುವವರು ಅಮೃತ ಗೌಡ. ಇವರು ಆ್ಯಕ್ಟಿಂಗ್‌ನಲ್ಲಿ ಮಾತ್ರವಲ್ಲ ಓದಿನಲ್ಲೂ ಟಾಪರ್‌. ಈ ಬಾರಿ ಪಿಯುಸಿ ಕಾಮರ್ಸ್ ಪರೀಕ್ಷೆ ಬರೆದಿರುವ ಇವರು ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆಗಿದ್ದಾರೆ. 600ಕ್ಕೆ 543 ಅಂಕ ಗಳಿಸುವ ಮೂಲಕ ತಾನು ನಟನೆಗೂ ಸೈ, ಓದೋದಕ್ಕೂ ಸೈ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ತಮ್ಮ ದ್ವಿತೀಯ ಪಿಯಸಿ ಮಾರ್ಕ್ಸ್ ಶೀಟ್ ಅನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ ತನ್ವಿ ಅಲಿಯಾಸ್ ಅಮೃತ. ಅಮೃತವರ್ಷಿಣಿ ಕೆ ಎನ್ನುವುದು ಇವರ ಪೂರ್ತಿ ಹೆಸರು. ಈಕೆ ಕನ್ನಡದಲ್ಲಿ 97 ಅಂಕ ಗ...