ಬೆಂಗಳೂರು, ಏಪ್ರಿಲ್ 19 -- ಭಾರತ ಕ್ರಿಕೆಟ್‌ ತಂಡದ ಮಾಜಿ ಆಲ್‌ರೌಂಡರ್ ಸಂಜಯ್ ಬಂಗಾರ್ ಅವರ ಪುತ್ರನಾಗಿದ್ದ ಆರ್ಯನ್ ಬಂಗಾರ್, ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಅನಾಯಾ ಬಂಗಾರ್ ಆಗಿ ಬದಲಾದರು. ಅಂದು ಪುತ್ರನಾಗಿದ್ದ ಅವರು, ಈಗ ಬಂಗಾರ್‌ ಅವ ಮಗಳಾಗಿ ಬದಲಾಗಿದ್ದಾರೆ. ಕ್ರೆಕೆಟಿಗರಾಗಿದ್ದ ಅನಾಯಾ ಈಗ ಸೋಷಿಯಲ್‌ ಮೀಡಿಯಾದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಅನಾಯಾ ಅವರು ಸದ್ಯ ಯುಕೆಯಲ್ಲಿ ವಾಸವಿದ್ದು, ಇತ್ತೀಚೆಗೆ ಭಾಗವಹಿಸಿದ ಸಂದರ್ಶನವೊಂದರಲ್ಲಿ ಕೆಲವು ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ.

"ನಾನು ನಿಮ್ಮೊಂದಿಗೆ ಮಲಗಬೇಕು" ಎಂದು ಅನಾಯಾ ಅವರಿಗೆ ಹಿರಿಯ ಕ್ರಿಕೆಟಿಗರೊಬ್ಬರು ಹೇಳಿದ್ದರಂತೆ. ಲಾಲಾಂಟಾಪ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ ಅನಾಯಾ ಅಚ್ಚರಿಯ ಮಾತುಗಳನ್ನಾಡಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ 'ವಿಷಕಾರಿ ಪುರುಷತ್ವ'ದ ಮಾದರಿ ಜೀವಂತವಾಗಿರುವ ಬಗ್ಗೆ ಅವರ ಖೇದ ವ್ಯಕ್ತಪಡಿಸಿದ್ದಾರೆ. ಹಿಂದೆ ಕ್ರಿಕೆಟಿಗರು ನಗ್ನ ಫೋಟೋಗಳನ್ನು ಕೇಳುತ್ತಿದ್ದರು ಎಂದಿರುವ ಅನಾಯಾ, ಲೈಂಗಿಕ ಕ್ರಿಯೆಯಲ್ಲಿ...