Mysuru, ಜನವರಿ 29 -- ಮೈಸೂರು: ಮೈಸೂರಿನಿಂದ ಗುಂಡ್ಲುಪೇಟೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಅಪಘಾತದ ವಲಯವಾಗಿ ಮಾರ್ಪಟ್ಟಿದೆ. ಕೆಲ ದಿನಗಳಲ್ಲಿ ಹಲವು ಅಪಘಾತಗಳು ಈ ಮಾರ್ಗದಲ್ಲಿ ನಡೆದಿವೆ. ಅದರಲ್ಲೂ ನಂಜನಗೂಡು-ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು ನಂಜನಗೂಡು ಹಾಗೂ ಗುಂಡ್ಲುಪೇಟೆ ಹೆದ್ದಾರಿ ಹಿರೀಕಾಟಿ ಗೇಟ್ ಬಳಿ ಕಳೆದ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಒಂದೇ ಕುಟುಂಬದ ಮೂರು ಮಂದಿ ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ್ದು, ಮತ್ತೊಬ್ಬರಿಗೆ ತೀವ್ರ ಗಾಯಗಳಾಗಿವೆ.

ನಂಜನಗೂಡು ತಾಲೂಕಿನ ಕೂಡ್ಲಾಪುರ ಗ್ರಾಮದ ಶಶಿಧರ್ ಆತನ ಪತ್ನಿ ಶಾಲಿನಿ,‌ ತಾಯಿ ಭಾಗ್ಯಮ್ಮ ಒಂದೇ ಕುಟುಂಬದ ಮೃತ ದುರ್ದೈವಿಗಳಾಗಿದ್ದು ಓರ್ವನ ಹೆಸರು ತಿಳಿದು ಬಂದಿಲ್ಲ. ಮೃತರು ಸರಗೂರು ತಾಲೂಕಿನ ಪುಣ್ಯಕ್ಷೇತ್ರ ಚಿಕ್ಕದೇವಮ್ಮನ ಬೆಟ್ಟದಿಂದ ಪೂಜಾ ಕಾರ್ಯಕ್ರಮ ಮುಗಿಸಿಕೊಂಡು ಎರಡು ಬೈಕುಗಳಲ್ಲಿ ಕೂಡ್ಲಾಪುರಕ್ಕೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.

ತೆರಳುವ ಮಾರ್ಗ ಮಧ್ಯೆ ಹಿರೀ...