ಭಾರತ, ಮಾರ್ಚ್ 13 -- ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಪ್ರಕಾರ ತ್ರಿಭಾಷಾ ಸೂತ್ರ ವಿವಾದಕ್ಕೀಡಾಗಿದ್ದು, ತಮಿಳುನಾಡು, ತೆಲಂಗಾಣ, ಕರ್ನಾಟಕ ಸರ್ಕಾರಗಳಿಂದ ವಿರೋಧ ವ್ಯಕ್ತವಾಗಿದೆ. ತ್ರಿಭಾಷಾ ಸೂತ್ರದ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಇದು ಸಂಸತ್ತಿನ ಅಧಿವೇಶನದಲ್ಲೂ ಪ್ರಸ್ತಾಪವಾಗಿದೆ. ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ರಾಷ್ಟ್ರೀಯ ಶಿಕ್ಷಣ ನೀತಿಯ ತ್ರಿಭಾಷಾ ಸೂತ್ರದ ಪರ ಬೆಂಬಲಕ್ಕೆ ನಿಂತಿದ್ದು, ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ತನ್ನ ಭಾಷಾ ಪ್ರೌಢಿಮೆಯ ಬಗ್ಗೆ ಹೆಮ್ಮೆ ಪಟ್ಟುಕೊಂಡ ಸುಧಾ ಮೂರ್ತಿ, "ಯಾರೇ ಆದರೂ ಅನೇಕ ಭಾಷೆಗಳನ್ನು ಕಲಿಯುವುದು ಸಾಧ್ಯವಿದೆ. ಈ ನಂಬಿಕೆ ನನಗೆ ಯಾವತ್ತಿಗೂ ಇದೆ. ನನಗೇ 7 ರಿಂದ 8 ಭಾಷೆ ಬರುತ್ತೆ. ನಾನು ಕಲಿಕೆಯನ್ನು ಆನಂದಿಸುತ್ತೇನೆ. ಹಾಗಾದರೆ ಮಕ್ಕಳ ವಿಚಾರಕ್ಕೆ ಬಂದರೆ ಅವರು ಬಹಳಷ್ಟು ಭಾಷೆಗಳನ್ನು ಕಲಿಯಬಹುದಲ್ಲವೇ ಎಂದು ಎಎನ್‌ಐ ಸುದ್ದಿ ಸಂಸ್ಥೆ ಜತೆಗೆ ಮಾತನಾಡುತ್ತ ಹೇಳಿದ್ದಾರೆ.

ಸಂಸತ್ತಿನಲ್ಲಿ ಮಂಗಳವಾರ ಎನ್‌ಇಪಿ ಕುರಿತಾದ ಚರ್ಚೆ ನಡೆಯುವಾಗ ತನ್ನ ನಿಲುವನ್ನ...