Bengaluru, ಮಾರ್ಚ್ 17 -- Dhruva 369: ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಇಂದು (ಮಾ.17) ನಮ್ಮ ನಡುವೆ ಭೌತಿಕವಾಗಿ ಇದ್ದಿದ್ದರೆ ಅವರಿಗೆ ಭರ್ತಿ 50 ವರ್ಷ ತುಂಬುತ್ತಿತ್ತು. ಇದೀಗ ಈ ವಿಶೇಷ ದಿನದ ಪ್ರಯುಕ್ತ ಪುನೀತ್‌ ರಾಜ್‌ಕುಮಾರ್‌ ಅವರನ್ನು ಮತ್ತೆ ತೆರೆಮೇಲೆ ಕಣ್ತುಂಬಿಕೊಳ್ಳಬಹುದು ಎಂಬ ಸುಳಿವು ನೀಡಿದ್ದಾರೆ ನಿರ್ದೇಶಕ ಜೆ.ಕೆ. ಶಂಕರ್‌ ನಾಗ್. ಅಂದರೆ, ಗ್ರಾಫಿಕ್ಸ್‌ ಮೂಲಕ ಕೇವಲ ಪುನೀತ್‌ ರಾಜ್‌ಕುಮಾರ್‌ ಮಾತ್ರವಲ್ಲ ಅಣ್ಣಾವ್ರನ್ನೂ ಕರೆತಂದಿದ್ದಾರೆ ನಿರ್ದೇಶಕರು. ಈ ಸಿನಿಮಾ ಧ್ರುವ 369 ಎಂಬ ಶೀರ್ಷಿಕೆಯ ಅಡಿಯಲ್ಲಿ ತೆರೆಗೆ ಬರಲಿದ್ದು, ಅಪ್ಪು ಬರ್ತ್‌ಡೇ ಪ್ರಯುಕ್ತ ಟೀಸರ್‌ ಬಿಡುಗಡೆ ಆಗಿದೆ.

2022ರಲ್ಲಿಯೇ ಸೆಟ್ಟೇರಿದ್ದ ಈ ಸಿನಿಮಾ, ಇದೀಗ ಪುನೀತ್‌ ರಾಜ್‌ಕುಮಾರ್‌ ಬರ್ತ್‌ಡೇ ಪ್ರಯುಕ್ತ ಅಚ್ಚರಿಯ ಟೀಸರ್‌ ಜತೆಗೆ ಆಗಮಿಸಿದೆ. ಚಿತ್ರದ 1 ನಿಮಿಷ 40 ಸೆಕೆಂಡ್‌ನ ಟೀಸರ್‌ಅನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಮ...