ಭಾರತ, ಮಾರ್ಚ್ 23 -- ಎಂಎಸ್‌ ಧೋನಿ ಕ್ರಿಕೆಟ್‌ ಆಡೋದು ಐಪಿಎಲ್‌ನಿಂದ ಐಪಿಎಲ್‌ ಸಮಯದಲ್ಲಿ ಮಾತ್ರ. ಕೊನೆಯ ಬಾರಿ ಕ್ರಿಕೆಟ್ ಆಡಿ ಸುಮಾರು 10 ತಿಂಗಳ ನಂತರ, ಮತ್ತೆ ಮೈದಾನಕ್ಕಿಳಿದಿರುವ ಮಾಹಿ, ಮತ್ತೆ ಅದೇ ಫಿಟ್‌ನೆಸ್‌ನೊಂದಿಗೆ ಆಡುತ್ತಿದ್ದಾರೆ. ಟೀಮ್‌ ಇಂಡಿಯಾದಿಂದ ನಿವೃತ್ತಿ ಪಡೆದು ಹಲವು ವರ್ಷಗಳಾದರೂ ಈಗಲೂ ಐಪಿಎಲ್‌ನಲ್ಲಿ ಆಡುತ್ತಿರುವ ಧೋನಿ, ಸಿಎಸ್‌ಕೆ ಪರ ಕಣಕ್ಕಿಳಿಯುತ್ತಿದ್ದಾರೆ. ವಿಶ್ವದ ಅತ್ಯಂತ ಚಾಣಾಕ್ಷ ಹಾಗೂ ತೀಕ್ಷ್ಣ ವಿಕೆಟ್ ಕೀಪರ್‌ಗಳಲ್ಲಿ ಒಬ್ಬರಾಗಿರುವ ಧೋನಿ, ಈ ಬಾರಿ ಮತ್ತೆ ಸ್ಟಂಪ್ಸ್‌ ಹಿಂದೆ ತಮ್ಮ ಚಾಣಾಕ್ಷ ನಡೆ ತೋರುತ್ತಿದ್ದಾರೆ. 43ನೇ ವಯಸ್ಸಿನಲ್ಲಿಯೂ, ವಯಸ್ಸೇ ನಾಚುವಂತೆ ಫಿಟ್‌ ಆಗಿ ಆಡುತ್ತಿದ್ದಾರೆ.

ಪ್ರತಿ ಬಾರಿಯೂ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಮಾಹಿ ಪುನರಾಗಮನವನ್ನು ಸಂಭ್ರಮಿಸುತ್ತಾರೆ. ಅಭಿಮಾನಿಗಳನ್ನು ಮಾಹಿ ಯಾವತ್ತೂ ನಿರಾಶೆಗೊಳಿಸಲ್ಲ. ಐಪಿಎಲ್‌ 18ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಇಂದು (ಮಾ.23) ಮುಂಬೈ ಇಂಡಿಯನ್ಸ್‌ ವಿರುದ್ಧ ಸಿಎಸ್‌ಕೆ ಕಣಕ್ಕಿಳಿದಿದೆ. ಪಂದ್ಯದಲ್ಲ...