ಭಾರತ, ಏಪ್ರಿಲ್ 25 -- ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಸನ್​ರೈಸರ್ಸ್​ ಹೈದರಾಬಾದ್ ಸಂಘಟಿತ ಹೋರಾಟದ ಫಲವಾಗಿ ಕೊನೆಗೂ ಜಯದ ನಗೆ ಬೀರಿದೆ. ಮತ್ತೊಂದೆಡೆ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತನ್ನ ತವರಿನಲ್ಲಿ ಸತತ 4ನೇ ಸೋಲಿನ ಕಹಿ ಅನುಭವಿಸಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿದ ಎಸ್​ಆರ್​​ಹೆಚ್​, ಪ್ಲೇಆಫ್ ಸ್ಥಾನ ಖಚಿತಪಡಿಸಿಕೊಳ್ಳಲು ಉಳಿದೈದು ಪಂದ್ಯಗಳನ್ನೂ ಗೆಲ್ಲಬೇಕಿದೆ. ಆದರೆ ಎಂಎಸ್ ಧೋನಿ ನಾಯಕತ್ವ ವಹಿಸಿಕೊಂಡರೂ ಸಿಎಸ್​ಕೆ ಲಕ್ ಬದಲಾಗಿಲ್ಲ. ಚೆನ್ನೈನಲ್ಲೇ ಐದು ಸೋಲಿನ ಜತೆಗೆ ಪ್ಲೇಆಫ್ ಹಾದಿಯೂ ಬಹುತೇಕ ಅಂತ್ಯವಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್​ನ 43ನೇ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಎಸ್​ಆರ್​​ಹೆಚ್ 5 ವಿಕೆಟ್​​ ಗೆಲುವು ಸಾಧಿಸಿತು. ಇದು ಚೆಪಾಕ್ ಮೈದಾನದಲ್ಲಿ ಚೆನ್ನೈ ಎದುರು ದಾಖಲಿಸಿದ ಮೊದಲು ಜಯ ಇದಾಗಿದೆ. ಹರ್ಷಲ್ ಪಟೇಲ್ (28/4) ಆರ್ಭಟಕ್ಕೆ ತತ್ತರಿಸಿದ ಚೆನ್ನೈ ನಿಗದಿತ 20 ಓವರ್​​ಗಳಲ್ಲಿ 154 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಹೈದರಾಬಾದ್ ಇನ್ನೂ 8 ಎಸೆತಗಳನ...