ಭಾರತ, ಮಾರ್ಚ್ 17 -- ಐಪಿಎಲ್ 18ನೇ ಆವೃತ್ತಿಯು ಮಾರ್ಚ್‌ 22ರ ಶನಿವಾರದಿಂದ ಪ್ರಾರಂಭವಾಗಲಿದೆ. ಈವರೆಗೆ 17 ಆವೃತ್ತಿಗಳನ್ನು ಯಶಸ್ವಿಯಾಗಿ ಮುಗಿಸಿರುವ ಲೀಗ್, ಕಳೆದ ಹಲವು ವರ್ಷಗಳಿಂದ ಹಲವಾರು ಜಾಗತಿಕ ಪ್ರತಿಭೆಗಳನ್ನು ಬೆಳಕಿಗೆ ತಂದಿದೆ. ಕೆಲವು ಆಟಗಾರರು ಹಲವಾರು ಆವೃತ್ತಿಗಳಲ್ಲಿ ಆಡಿದ್ದಾರೆ. ಯುವ ಆಟಗಾರರಾಗಿ ಐಪಿಎಲ್‌ ಪದಾರ್ಪಣೆ ಮಾಡಿದ ಹಲವು ಆಟಗಾರರು ಇದೀಗ ದಿಗ್ಗಜರಾಗಿ ಕಣಕ್ಕಿಳಿಯುತ್ತಿದ್ದಾರೆ. ಎಂಎಸ್‌ ಧೋನಿ, ವಿರಾಟ್‌ ಕೊಹ್ಲಿ, ಆರ್‌ ಅಶ್ವಿನ್‌ ಅವರಂಥಾ ಆಟಗಾರರು ಹಲವು ವರ್ಷಗಳಿಂದ ಐಪಿಎಲ್‌ ಅಖಾಡದಲ್ಲಿದ್ದಾರೆ. ಹೀಗಾಗಿ ಕೆಲವು ಆಟಗಾರರಿಗೆ ಈ ಆವತ್ತಿಯು ಕೊನೆಯ ಐಪಿಎಲ್‌ ಟೂರ್ನಿ ಆಗುವ ಸಾಧ್ಯತೆ ಇದೆ.

ಈ ಋತುವಿನ ಐಪಿಎಲ್‌ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಳ್ಳಬಹುದಾದ ಕೆಲವು ಆಟಗಾರರನ್ನು ನೋಡೋಣ.

ಈ ಪಟ್ಟಿಯಲ್ಲಿ ಬರುವ ಮೊದಲ ಹೆಸರೇ ಧೋನಿ. ಈ ಹಿಂದೆ ಹಲವು ಆವೃತ್ತಿಗಳಲ್ಲಿ ಮಾಹಿ ಐಪಿಎಲ್‌ ವಿದಾಯದ ಬಗ್ಗೆ ಅಭಿಮಾನಿಗಳಿಗೆ ಅನುಮಾನವಿತ್ತು. ಆದರೆ ಅಭಿಮಾನಿಗಳಿಗಾಗಿ ಮತ್ತೆ ಐಪಿಎಲ್‌ ಆಡುವ ನಿರ್ಧಾರಕ್ಕೆ ಅವರ...