ಭಾರತ, ಫೆಬ್ರವರಿ 21 -- ಹುಬ್ಬಳ್ಳಿಯಲ್ಲಿ ಎರಡು ದಿನಗಳ ಕಾಲ ಜರುಗಿದ "ಧಾರವಾಡ ಸಂಸದರ ಸಾಂಸ್ಕೃತಿಕ ಮತ್ತು ಕ್ರೀಡಾ ಮಹೋತ್ಸವ"ದಲ್ಲಿ ಗಾಯಕ ಕೈಲಾಶ್ ಖೇರ್‌ ಗಾನ ಸಂಭ್ರಮ ಮೆರುಗು ನೀಡಿತು. ಇದೇ ವೇಳೆ, ನಡೆದ ಗಾಳಿ ಪಟ ಉತ್ಸವ, ಗ್ರಾಮೀಣ ಕ್ರೀಡೆಗಳ ಸಡಗರ ಉತ್ಸವ ಕಳೆಗಟ್ಟುವಂತೆ ಮಾಡಿತು.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಎರಡು ದಿನಗಳ ಕಾಲ ಜರುಗಿದ "ಧಾರವಾಡ ಸಂಸದರ ಸಾಂಸ್ಕೃತಿಕ ಮತ್ತು ಕ್ರೀಡಾ ಮಹೋತ್ಸವ" ಅತ್ಯಾಕರ್ಷಣೀಯವಾಗಿತ್ತು. ಬಾನಂಗಳದಲ್ಲಿ ಬಣ್ಣ ಬಣ್ಣದ ಗಾಳಿಪಟಗಳ ಕಲರವ ಅತಿ ರಂಜನೀಯವಾಗಿತ್ತು.

ಉತ್ಸವದಲ್ಲಿ ನೆರೆ ರಾಷ್ಟ್ರ, ನೆರೆ ರಾಜ್ಯ ಮತ್ತು ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಗಾಳಿಪಟ ಕಲಿಗಳು ನಾನಾ ಮಾದರಿಯ ಕಲರ್ ಫುಲ್ ಗಾಳಿಪಟಗಳನ್ನು ಮುಗಿಲೆತ್ತರಕ್ಕೆ ಹರಿಬಿಟ್ಟು ಕಣ್ಮನ - ಹೃನ್ಮನ ಸೆಳೆದರು. ಆಗಸದಲ್ಲಿ ಹಾರಾಡುತ್ತಿದ್ದ ಗಾಳಿಪಟಗಳು ಪ್ರೇಕ್ಷಕರ ಕಂಗೊಳಿಸಿದವು.

ಎರಡು ದಿನಗಳ ಈ ಗಾಳಿಪಟ ಉತ್ಸವಕ್ಕೆ ಗುರುವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಗಾಳಿಪಟ ಹಾರಿ ಬಿಡುವ ಮೂಲಕ ಚಾಲನೆ ನೀಡುತ್ತಲೇ ಅಮೇರ...