Dharwad, ಏಪ್ರಿಲ್ 13 -- ಜಾಗೃತ ಶ್ರೀ ಲೈನ್ ಬಜಾರ್ ಮಾರುತಿ ದೇವರ ದೇವಸ್ಥಾನದ 56ನೇ ವಾರ್ಷಿಕ ಮಹಾ ರಥೋತ್ಸವ ಆಚರಣೆ ಹನುಮಾನ್ ಜಯಂತಿ ದಿನವೇ (ಏಪ್ರಿಲ್ 12) ನೆರವೇರಿತು. ದೇವಸ್ಥಾನದ ವಿಶ್ವಸ್ಥ ಮಂಡಳಿ ಹನುಮಾನ್ ಜಯಂತಿ ಕಾರ್ಯಕ್ರಮವನ್ನೂ ಆಯೋಜಿಸಿತ್ತು.

ಹನುಮ ಜಯಂತಿ ಅಂಗವಾಗಿ ಎಪ್ರಿಲ್ 12ರಂದು ಬೆಳಿಗ್ಗೆ 6.15ಕ್ಕೆ ಶ್ರೀ ಹನುಮಂತ ದೇವರ ತೊಟ್ಟಿಲೋತ್ಸವ, ವಿಶೇಷ ಪೂಜೆ, ಅಲಂಕಾರ ಸೇವೆ, ಪ್ರಸಾದ ವಿತರಣೆ ನಡೆಯಿತು. ಮಹಾ ರಥೋತ್ಸವ ಕೂಡ ನೆರವೇರಿತು.

ವಾರ್ಷಿಕ ಮಹಾ ರಥೋತ್ಸವ ನಿಮಿತ್ತ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ರಕ್ತದಾನ ಶಿಬಿರ ಹಾಗೂ ಮಧ್ಯಾಹ್ನ 12 ರಿಂದ ಅನ್ನಸಂತರ್ಪಣೆ ನೆರವೇರಿತು.

ಹನುಮಾನ್ ಜಯಂತಿ ಮತ್ತು ವಾರ್ಷಿಕ ಮಹಾ ರಥೋತ್ಸವದ ಆಕರ್ಷಣೆಯಾಗಿ ಜಾಝ್‌ ತಂಡ ತನ್ನ ಪ್ರದರ್ಶನ ನೀಡಿತು.

ಧಾರವಾಡ ಲೈನ್ ಬಜಾರ್‌ ಶ್ರೀ ಹನುಮಂತ ದೇವರು ಜಾಗೃತ ಶ್ರೀ ಆಂಜನೇಯನಾಗಿದ್ದು, ಭಕ್ತರಿಗೆ ಬೇಡಿದ ವರನೀಡುವ ಕರುಣಾಮಯಿಯಾಗಿದ್ದಾನೆ. ಪ್ರತಿ ಶನಿವಾರ ಸೇರಿದಂತೆ ಇಲ್ಲಿ ನಿತ್ಯವೂ ಸಾವಿರಾರು ಜನ ಭಕ್ತರು ದರ್ಶನ ಪಡೆದು ಪ...