ಭಾರತ, ಮಾರ್ಚ್ 6 -- ಬೆಂಗಳೂರು: ಕನ್ನಡ ಕಂಟೆಂಟ್‌ ಕ್ರಿಯೆಟರ್‌ ದೂತ ಸಮೀರ್‌ ಇತ್ತೀಚೆಗೆ ಅಪ್ಲೋಡ್‌ ಮಾಡಿರುವ ಯೂಟ್ಯೂಬ್‌ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಧರ್ಮಸ್ಥಳ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಡಿರುವ ಈ ವಿಡಿಯೋ 1.3 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದೆ. ಈ ವಿಡಿಯೋಗೆ 46,200 + ಕಾಮೆಂಟ್‌ಗಳು ಬಂದಿವೆ. ಈ ವಿಡಿಯೋಗೆ ಸಂಬಂಧಪಟ್ಟಂತೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯೂ ನಡೆಯುತ್ತಿದೆ. ಇದೀಗ ಈ ವಿಡಿಯೋಗೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಕಳುಹಿಸಿರುವ ಫ್ಯಾಕ್ಸ್ ಸಂದೇಶದ ಕುರಿತೂ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಆರಂಭವಾಗಿದೆ.

ಎಲ್ಲಾ ಪೊಲೀಸ್‌ ಆಯುಕ್ತರಿಗೆ, ಎಲ್ಲಾ ಜಿಲ್ಲಾ ಪೊಲೀಸ್‌ ಅಧೀಕ್ಷಕರಿಗೆ, ಕೆಜಿಎಫ್‌ ಹಾಗೂ ರೈಲ್ವೇಸ್‌ ಸೇರಿದಂತೆ ಎಲ್ಲರಿಗೂ ಎಡಿಜಿಪಿ ಕರ್ನಾಟಕ ಅವರಿಂದ ಕಳುಹಿಸಿದ ಫ್ಯಾಕ್ಸ್‌ ಸಂದೇಶದಲ್ಲಿ ಈ ಮುಂದಿನಂತೆ ಬರೆಯಲಾಗಿದೆ. "ಇತ್ತೀಚೆಗೆ ಸಮೀರ್‌ ಎಂಬಾತನು ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಧರ್ಮಸ್ಥಳದಲ್ಲಿ ನಡೆದಿದ್...