Dharmasthala, ಏಪ್ರಿಲ್ 18 -- ಮಂಗಳೂರು: ಈಗ ಬೇಸಿಗೆ ರಜೆಗಳು ಇರುವುದರಿಂದ ದಕ್ಷಿಣ ಕನ್ನಡದ ಧರ್ಮಸ್ಥಳ ಸಹಿತ ಪ್ರಮುಖ ಧಾರ್ಮಿಕ ತಾಣಗಳಿಗೆ ಹೋಗುವ ಪ್ರವಾಸಿಗರ ಸಂಖ್ಯೆ ಅಧಿಕ. ಅದರಲ್ಲೂ ಧರ್ಮಸ್ಥಳ, ಸುಬ್ರಹ್ಮಣ್ಯದಲ್ಲಂತೂ ಭಕ್ತರ ಭೇಟಿ ಪ್ರಮಾಣ ಹೆಚ್ಚಾಗಿದೆ. ಧರ್ಮಸ್ಥಳಕ್ಕೆ ಪ್ರವಾಸ ಹೋಗುವವರು ಅಲ್ಲಿನ ಶ್ರೀ ಮಂಜುನಾಥಸ್ವಾಮಿ ದರ್ಶನದ ಸಮಯವನ್ನು ಕೊಂಚ ಬದಲಾವಣೆ ಮಾಡಲಾಗಿದೆ. ಧರ್ಮಸ್ಥಳದಲ್ಲಿ ವಿಷು ಜಾತ್ರೆ ಇರುವುದರಿಂದ ಮುಂದಿನ ಆರು ದಿನಗಳ ಕಾಲ ದರ್ಶನದ ಸಮಯವನ್ನು ಬದಲಾವಣೆ ಮಾಡಲಾಗಿದೆ. ವಿಷು ಉತ್ಸವದ ನಂತರ ಮೊದಲಿನಂತೆಯೇ ದರ್ಶನ ಸಮಯ ಮುಂದುವರಿಯಲಿದೆ. ಭಕ್ತರು ಈ ಸಮಯವನ್ನು ಹೊಂದಿಸಿಕೊಂಡು ದರ್ಶನಕ್ಕೆ ಆಗಮಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಮಾಹಿತಿ ನೀಡಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ದೇವಳದಲ್ಲಿ ವಿಷು ಜಾತ್ರೆ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನಡೆಯುವುದರಿಂದ ದೇವರ ದರ್ಶನ ಸಮಯದಲ್ಲಿ ವ್ಯತ್ಯಯವಾಗಲಿದೆ ಎಂದಿದೆ.

2025ರ ಏಪ್ರಿಲ್‌18...