Bengaluru, ಮಾರ್ಚ್ 12 -- Dharmasthala Soujanya Case: ಧರ್ಮಸ್ಥಳದ ಸೌಜನ್ಯ ಇಲ್ಲವಾಗಿ ದಶಕ ಕಳೆದರೂ, ಇಂದಿಗೂ ಆಕೆಯ ಸಾವಿಗೆ ನ್ಯಾಯ ಸಿಕ್ಕಿಲ್ಲ ಎಂದು, ದಕ್ಷಿಣ ಕನ್ನಡದಲ್ಲಿ ಹೋರಾಟಗಳು ನಡೆಯುತ್ತಲೇ ಇವೆ. ಸೋಷಿಯಲ್‌ ಮೀಡಿಯಾ ಅಭಿಯಾನಗಳೂ ನಡೆಯುತ್ತಿವೆ. ಪರ ವಿರೋಧ ಚರ್ಚೆಗಳು ಇಂದಿಗೂ ಚರ್ಚೆಯಾಗುತ್ತಲೇ ಇದೆ. ಇದರ ಹಿಂದೆ ಪ್ರಭಾವಿಗಳ ಕೈವಾಡ ಇದೆ ಎಂದು ಈ ಹಿಂದಿನಿಂದಲೂ ಸುದ್ದಿಯಾಗುತ್ತಿದ್ದರೂ, ತಾರ್ಕಿಕ ಅಂತ್ಯ ಕಂಡಿಲ್ಲ. ಇದೀಗ ಇದೇ ಘಟನೆ ಬಗ್ಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಬೆಳ್ತಂಗಡಿ ಭಾಗದಲ್ಲಿ ನೂರಾರು ಅಸಹಜ ಸಾವುಗಳಾಗಿವೆ ಎಂದಿದ್ದಾರೆ.

ಧರ್ಮಸ್ಥಳ ಸೌಜನ್ಯ ಕೇಸ್‌ ಬೂದಿ ಮುಚ್ಚಿದ ಕೆಂಡದಂತಿತ್ತು. ಈ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್‌ ಸಿಕ್ಕಿದ್ದು, ದೂತ ಸಮೀರ್‌ ಎಂಡಿ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ "ಧರ್ಮಸ್ಥಳ Horror; ಊರಿಗೆ ದೊಡ್ಡವರೆ ಕೊಲೆ ಮಾಡಿದವರಾ?" ಎಂಬ ವಿಡಿಯೋ ವೈರಲ್‌ ಆದ ಬಳಿಕ. ಅಲ್ಲಿಂದ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯ ವಿಷಯವಾ...