ಭಾರತ, ಮಾರ್ಚ್ 5 -- ಧನು ರಾಶಿಯ ಯುಗಾದಿ ವರ್ಷ ಭವಿಷ್ಯ: ನೀವು ಮೂಲ ನಕ್ಷತ್ರದ 1, 2, 3 ಮತ್ತು 4ನೇ ಪಾದ, ಪೂರ್ವಾಷಾಢ ನಕ್ಷತ್ರದ 1, 2, 3 ಮತ್ತು 4ನೇ ಪಾದಗಳು, ಉತ್ತಾರಾಷಾಢ ನಕ್ಷತ್ರದ 1 ನೇ ಪಾದದಲ್ಲಿ ಜನಿಸಿದ್ದಲ್ಲಿ ನಿಮ್ಮದು ಧನು ರಾಶಿ ಆಗುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರವು ಯೆ, ಯೊ, ಬ ಅಥವಾ ಬಿ ಆದಲ್ಲಿ ಮೂಲ ನಕ್ಷತ್ರ. ಬು, ಧ, ಭ ಮತ್ತು ಢ ಆದಲ್ಲಿ ಪೂರ್ವಾಷಾಢ ನಕ್ಷತ್ರ ಹಾಗೂ ಬೆ ಆದಲ್ಲಿ ಉತ್ತರಾಷಾಢ ನಕ್ಷತ್ರ ಹಾಗೂ ಧನು ರಾಶಿ ಆಗುತ್ತದೆ. ವೈದಿಕ ಜ್ಯೋತಿಷ್ಯಶಾಸ್ತ್ರದ ರಾಶಿ ಚಕ್ರದಲ್ಲಿ ಧನು ರಾಶಿಯು 9ನೇ ರಾಶಿ ಆಗಿರುತ್ತದೆ. ಈ ರಾಶಿಗೆ ಸೇರಿದವರು ಸಾಮಾನ್ಯವಾಗಿ ಸತ್ಯ ಏನು ಹುಡುಕುವ, ಅರಿಯುವ, ಅನ್ವೇಷಣೆ ಮಾಡುವ ಸ್ವಭಾವ ಹೊಂದಿರುತ್ತಾರೆ. ವಿಶ್ರಾಂತಿಯೇ ಬೇಡ ಎನ್ನುತ್ತಾ ಸದಾ ಕನಸಿನ ಬೆನ್ನು ಹತ್ತುವ ಸ್ವಭಾವ ಇವರದು. ಸ್ವತಃ ಒಳ್ಳೆಯತನ ಇಷ್ಟಪಡುತ್ತಾರೆ, ಇತರರಿಗೂ ಒಳ್ಳೆಯದಾಗಲಿ ಎಂದು ಬಯಸುತ್ತಾರೆ. ಸಹಾನುಭೂತಿ ಇವತ ಮತ್ತೊಂದು ಎದ್ದು ಕಾಣುವ ಗುಣ. ಆದರೆ ತಮಗೆ ಒಳಿತಾಗಲಿ ಎಂದು ಆಪ್ತರು ನೀಡುವ ಸಲಹೆಗ...