ಭಾರತ, ಮಾರ್ಚ್ 5 -- ಧನುಷ್ ನಿರ್ದೇಶನದ ನಾಲ್ಕನೇ ಚಿತ್ರ 'ಇಡ್ಲಿ ಕಡಾಯಿ' ಏಪ್ರಿಲ್ 10 ರಂದು ಬಿಡುಗಡೆಯಾಗಬೇಕಿತ್ತು, ಆದರೆ ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಅಜಿತ್ ಕುಮಾರ್ ಅವರ 'ಗುಡ್ ಬ್ಯಾಡ್ ಅಗ್ಲಿ ಸಿನಿಮಾ ಇದೇ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಅದೇ ಕಾರಣಕ್ಕೆ ಧನುಷ್ ಅವರ ಸಿನಿಮಾವನ್ನು ಮುಂದೂಡಿರುವ ಸಾಧ್ಯತೆ ಇದೆ. ಇತ್ತೀಚಿನ ವರದಿಗಳ ಪ್ರಕಾರ ಈ ಎರಡೂ ಸಿನಿಮಾಗಳು ಒಂದಕ್ಕೊಂದು ಪೈಪೋಟಿ ನೀಡದಂತೆ ಒಂದೊಂದು ಸಿನಿಮಾ ಕೂಡ ಬೇರೆ ಬೇರೆ ಸಂದರ್ಭದಲ್ಲಿ ಬಿಡುಗಡೆಯಾಗುವಂತೆ ಮಾಡಲಾಗಿದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಧನುಷ್‌ ತಮ್ಮ ಸಿನಿಮಾವನ್ನು ಇನ್ಯಾವಾಗ ಬಿಡುಗಡೆ ಮಾಡಬಹುದು ಎಂಬ ಪ್ರಶ್ನೆ ಉದ್ಭವವಾಗಿದೆಯೇ ಹೊರತಾಗಿ ಉತ್ತರ ಸಿಕ್ಕಿಲ್ಲ.

ಹೊಸ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಬಹುದು ಎಂದು ಅಂದಾಜಿಸಲಾಗಿದೆ. ಧನುಷ್ ಮತ್ತು ನಿತ್ಯಾ ಮೆನನ್ ಇಡ್ಲಿ ಕಡಾಯಿ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಇದನ್ನು ವುಂಡರ್‌ಬಾರ್ ಫಿಲ್ಮ್ಸ್ ಕೂಡ ನಿರ್ಮಿಸಿದ...