ಭಾರತ, ಜೂನ್ 27 -- ಸ್ಯಾಂಡಲ್‌ವುಡ್‌ ನಟ ಅನೀಶ್‌ ತೇಜೇಶ್ವರ್‌ ಇದೀಗ ʻಲವ್ OTPʼ ಅನ್ನೋ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಶೂಟಿಂಗ್‌ ಮುಗಿಸಿಕೊಂಡಿರುವ ಅವರು, ಚಿತ್ರವನ್ನು ಪ್ರೇಕ್ಷಕರೆದುರಿಗೆ ತಲುಪಿಸೋ ಹೊಸ್ತಿಲಲ್ಲಿದ್ದಾರೆ. ಸದ್ಯ ಹೈದರಾಬಾದ್‌ನಲ್ಲಿ ಚಿತ್ರತಂಡ ಬೀಡುಬಿಟ್ಟಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನ ಮುಗಿಸುತ್ತಿದೆ.

ಈ ನಡುವೆ ಚಿತ್ರದ ಮುಹೂರ್ತದ ವಿಡಿಯೋವನ್ನು ಹಂಚಿಕೊಂಡು ನಾವು ಸದ್ಯದಲ್ಲೇ ಬರಲಿದ್ದೇವೆ ಅನ್ನೋ ಸೂಚನೆ ಕೊಟ್ಟಿದೆ. ಅನೀಶ್ ತೇಜೇಶ್ವರ್ ನಟಿಸಿ ನಿರ್ದೇಶಿಸುತ್ತಿರುವ ʻಲವ್ OTPʼ ಚಿತ್ರವನ್ನ ಭಾವಪ್ರೀತ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ವಿಜಯ್ ಎಂ ರೆಡ್ಡಿ ನಿರ್ಮಿಸುತ್ತಿದ್ದಾರೆ.

ʻಲವ್ OTPʼ ಚಿತ್ರಕ್ಕೆ ಗುಣಮಟ್ಟದ ತಾರಾಗಣ ತಂತ್ರಜ್ಞರ ದಂಡೇ ಕೆಲಸ ಮಾಡಿದೆ. ಹಾಗೇ ಹಲವಾರು ವಿಶೇಷ ವಿಚಾರಗಳು ಅಚ್ಚರಿಗಳು ಈ ಸಿನಿಮಾ ತುಂಬೆಲ್ಲಾ ಇದ್ದು, ಎಲ್ಲವನ್ನೂ ಒಂದೊಂದಾಗಿ‌ ವಿವರಿಸುತ್ತಾ ಪ್ರಚಾರ ಮಾಡೋ ಯೋಚನೆಯಲ್ಲಿದೆ ಚಿತ್ರತಂಡ. ಅಂದಹಾಗೆ ಈ ಸಿನಿಮಾ ಕನ್...