ಭಾರತ, ಮಾರ್ಚ್ 15 -- ಭಾರತದ ಉದ್ದಗಲಕ್ಕೂ ಸದ್ಯ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಹಾಗೂ ಅದರ ತ್ರಿ ಭಾಷಾ ಸೂತ್ರದ ವಿಚಾರ ಚರ್ಚೆಗೆ ಒಳಗಾಗಿದೆ. ತಮಿಳುನಾಡು ಡಿಎಂಕೆ ಸರ್ಕಾರ ದ್ವಿಭಾಷಾ ನೀತಿ ಪ್ರತಿಪಾದಿಸುತ್ತ ತಮಿಳು ಮತ್ತು ಇಂಗ್ಲಿಷ್ ಸಾಕು, ಹಿಂದಿ ಬೇಡ ಎಂದು ಹೇಳುತ್ತಿದೆ. ಶುಕ್ರವಾರ ಮಂಡಿಸಿದ ತಮಿಳುನಾಡು ಬಜೆಟ್‌ನಲ್ಲಿ ಲಾಂಛನದಲ್ಲಿ ರೂಪಾಯಿ ಚಿಹ್ನೆ ಬದಲಾಯಿಸಿ ಟೀಕೆಗೆ ಒಳಗಾಯಿತು. ಇದೇ ವೇಳೆ, ಫೇಸ್‌ಬುಕ್, ಟ್ವಿಟರ್ ಸೇರಿ ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ತ್ರಿ ಬಾಷಾ ಸೂತ್ರ, ದ್ವಿಭಾಷಾ ನೀತಿ ಕುರಿತು ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಕೆಲವು ಚರ್ಚೆಗಳು ಸ್ವಾರಸ್ಯಕರವಾಗಿದ್ದರೆ, ಇನ್ನು ಕೆಲವು ತೀರಾ ವೈಯಕ್ತಿಕ ಮಟ್ಟಕ್ಕೆ ಹೋಗಿ ಅನೇಕರು ನೊಂದುಕೊಳ್ಳುವಂತೆಯೂ ಅಗಿದೆ. ಇನ್ನು ಕೆಲವರು ತಮ್ಮ ವಾದಗಳನ್ನು ಪುಷ್ಟೀಕರಿಸಲು ಯಾವ್ಯಾವುದೋ ದಾಖಲೆಗಳನ್ನು ಇನ್ನೇನೋ ಎಂದು ಬಿಂಬಿಸತೊಡಗಿದ್ದಾರೆ. ಇರಲಿ, ಇಲ್ಲಿ ಫೇಸ್‌ಬುಕ್‌ನಲ್ಲಿ ನಡೆಯುತ್ತಿರುವ ದ್ವಿಭಾಷಾ ನೀತಿ ಚರ್ಚೆಗಳ ಪೈಕಿ ಪುಸ್ತಕ ಪ್ರಕಾಶಕ ರಾಧಾಕೃಷ್ಣ ಕೌಂಡಿನ...