Bengaluru, ಫೆಬ್ರವರಿ 3 -- ಕೆಂಪು ಬಣ್ಣದ ಬೇಳೆ ಅಥವಾ ಕೆಂಪು ತೊಗರಿಬೇಳೆ ತಿನ್ನುವುದರಿಂದ ಆರೋಗ್ಯಕ್ಕಿದೆ ಹಲವು ಪ್ರಯೋಜನ. ತೊಗರಿಬೇಳೆ ಸಾಂಬಾರ್ ತಯಾರಿಸುವಂತೆಯೇ ಇದರ ಸಾಂಬಾರ್ ಅಥವಾ ಇತರೆ ತರಕಾರಿಗಳೊಂದಿಗೆ ಬೆರೆಸಿ ಸಾರು ತಯಾರಿಸಲಾಗುತ್ತದೆ. ಇದೊಂದು ದ್ವಿದಳ ಧಾನ್ಯವಾಗಿದ್ದು ಬಹುತೇಕ ಮಂದಿ ಎಲ್ಲರೂ ಸೇವಿಸುತ್ತಾರೆ. ಆದರೆ, ಬಂಗಾಳಿಗಳು ಮಸೂರ್ ದಾಲ್ ಅಥವಾ ಕೆಂಪು ತೊಗರಿಬೇಳೆಯನ್ನು ಮಾಂಸಾಹಾರವೆಂದು ಪರಿಗಣಿಸುತ್ತಾರೆ. ಹೀಗಾಗಿ ಪಶ್ಚಿಮ ಬಂಗಾಳದಲ್ಲಿ ಸಸ್ಯಾಹಾರಿಗಳು ಇದನ್ನು ತಿನ್ನುವುದಿಲ್ಲ. ಕೆಂಪು ತೊಗರಿಬೇಳೆಯನ್ನು ಅಲ್ಲಿ ಮಾಂಸಾಹಾರಿ ಪಟ್ಟಿಗೆ ಸೇರಿಸಲಾಗಿದೆ. ಈ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ.

ಪಶ್ಚಿಮ ಬಂಗಾಳದಲ್ಲಿ ಕೆಂಪು ತೊಗರಿಬೇಳೆಯನ್ನು ಮಾಂಸಾಹಾರವೆಂದು ಪರಿಗಣಿಸಲು ಒಂದು ಕಥೆಯಿದೆ. ಸಹಸ್ರಬಾಹು ಅರ್ಜುನ ಎಂಬ ರಾಜನು ಜಮದಗ್ನಿ ಬಳಿ ಕಾಮಧೇನುವನ್ನು ಕದಿಯುತ್ತಾನೆ. ಅದನ್ನು ರಾಜನು ಬಲವಂತವಾಗಿ ಎಳೆದೊಯ್ಯುತ್ತಾನೆ. ಆಗ ಹಸುವಿಗೆ ಗಾಯವಾಗಿ ರಕ್ತಸ್ರಾವವಾಗುತ್ತದೆ. ರಕ್ತದ ಹನಿಗಳು ಬೀಳುವ ಸ್ಥಳದಿಂದ ಈ ಕ...