ಭಾರತ, ಮೇ 16 -- ದ್ವಿತೀಯ ಪಿಯುಸಿ ಪರೀಕ್ಷೆ 2ರ ಫಲಿತಾಂಶ: ಕರ್ನಾಟಕದ ದ್ವಿತೀಯ ಪಿಯುಸಿ ಪರೀಕ್ಷೆ 2ರ ಫಲಿತಾಂಶ ಪ್ರಕಟವಾಗಿದ್ದು, ಶೇಕಡ 31.27 ಫಲಿತಾಂಶ ಬಂದಿದೆ. ಪರೀಕ್ಷೆ 2 ಬರೆದ ಒಟ್ಟು 1,94,077 ವಿದ್ಯಾರ್ಥಿಗಳ ಪೈಕಿ 60,692 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ ದ್ವಿತೀಯ ಪಿಯುಸಿ ಪರೀಕ್ಷೆ 1ರಲ್ಲಿ ಫಲಿತಾಂಶ ಪೂರ್ಣಗೊಂಡಿರದ ಹಾಗೂ ಹೊಸದಾಗಿ 1,53,620 ವಿದ್ಯಾರ್ಥಿಗಳು ಮರುಪರೀಕ್ಷೆ ಬರೆದಿದ್ದು, ಈ ಪೈಕಿ 41,719 ಉತ್ತೀರ್ಣರಾಗಿದ್ದಾರೆ. ಇನ್ನುಳಿದಂತೆ, 71,964 ವಿದ್ಯಾರ್ಥಿಗಳು ಅಂಕ ಸುಧಾರಿಸುವುದಕ್ಕಾಗಿ ಪರೀಕ್ಷೆ ಬರೆದಿದ್ದು, ಈ ಪೈಕಿ 41,719 ಅಂಕ ಸುಧಾರಿಸಿಕೊಂಡಿರುವುದಾಗಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ 2ರ ಕಲಾ ವಿಭಾಗದಲ್ಲಿ 80,499 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 20,427 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉತ್ತೀರ್ಣ ಪ್ರಮಾಣ ಶೇಕಡ 25.38. ಇದೇ ರೀತಿ, ವಾಣಿಜ್ಯ ವಿಭಾಗದಲ್ಲಿ 58,903 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 21,052...