Bengaluru, ಏಪ್ರಿಲ್ 11 -- ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು (ಕೆಎಸ್ಇಎಬಿ) ಪಿಯುಸಿ 2025ನೇ ಸಾಲಿನ ಫಲಿತಾಂಶವನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ತಮ್ಮ ದ್ವಿತೀಯ ಪಿಯುಸಿ ಫಲಿತಾಂಶವನ್ನು ನೋಂದಣಿ ಸಂಖ್ಯೆಯ ಮೂಲಕ ಪರೀಕ್ಷಿಸಬಹುದಾಗಿದೆ. ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶವನ್ನು karresults.nic.in ಅಲ್ಲಿ ಲಭ್ಯವಿರುತ್ತದೆ. ಇದರಲ್ಲಿ ಪಾಸಾದ ಅಭ್ಯರ್ಥಿಗಳು ಇಂಜಿನಿಯರಿಂಗ್‌ ಮಾಡುವುದಿದ್ದರೆ, ಮುಂದಿನ ಹಂತದ ತಯಾರಿ ಕರ್ನಾಟಕ ಸಿಇಟಿ (KCET 2025) ಪರೀಕ್ಷೆಯಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವು ಕೆಸಿಇಟಿಯ ಪ್ರವೇಶ ಕಾರ್ಡ್‌ನ ಡೌನ್‌ಲೋಡ್‌ ಲಿಂಕ್‌ ಅನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಪಾಸ್‌ವರ್ಡ್‌ ಮೂಲಕ ಡೌನ್‌ಲೊಡ್‌ ಲಿಂಕ್‌ ಅನ್ನು ಪ್ರವೇಶಿಸಬಹುದು. ಪರೀಕ್ಷಾ ದಿನದಂದು, ಅಭ್ಯರ್ಥಿಗಳು ತಮ್ಮ ಕೆಸಿಇಟಿ ಹಾಲ್‌ ಟಿಕೆಟ್‌ ಜೊತೆಗೆ ಮಾನ್ಯತೆಯಿರುವ ಒಂದು ಪೋಟೋ ಐಡಿ ಪುರಾವೆಯನ್ನು ಪರೀಕ್ಷಾ ಕೇಂದ್ರಕ್ಕೆ ...