ಭಾರತ, ಮಾರ್ಚ್ 1 -- ಬೆಂಗಳೂರು: ದುಬಾರಿ ಬೆಲೆಯ ಬೈಕ್‌ಗಳನ್ನೇ ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಕೆ ಆರ್‌ ಪುರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಈತ ಕದ್ದದ್ದು ಒಂದೆರಡು ದಿಚಕ್ರವಾಹನಗಳನ್ನಲ್ಲ. ಮೂರು ವರ್ಷಗಳಲ್ಲಿ ನೂರು ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಅಗ್ಗದ ಬೆಲೆಗೆ ಮಾರಾಟ ಮಾಡುತ್ತಿದ್ದ. ಈ ಅಸಮಾನ್ಯ ಕಳ್ಳ ಬೇರಾರೂ ಅಲ್ಲ. ಆಂಧ್ರಪ್ರದೇಶದ ಬಂಗಾರುಪಾಳ್ಯಂನ ನಿವಾಸಿಯಾದ ಪ್ರಸಾದ್‌ ಬಾಬು.

ಬೆಂಗಳೂರಿಗೆ ಬರುತ್ತಿದ್ದ ಈತ ದುಬಾರಿ ಬೆಲೆಯ ಬೈಕ್‌ಗಳನ್ನೇ ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದ. ಒಂದೊಂದು ಬೈಕ್‌ ಬೆಲೆ ಎರಡು ಲಕ್ಷ ರೂ. ದಾಟುತ್ತಿತ್ತು. ಆದರೆ ಈತ ಕದ್ದ ಬೈಕ್‌ಗಳನ್ನು ಕೇವಲ 15ರಿಂದ 20 ಸಾವಿರ ರೂಪಾಯಿಗೆ ಮಾರಿಕೊಂಡು ಹಣ ಸಂಪಾದನೆ ಮಾಡುತ್ತಿದ್ದ. ಹಗಲು ರಾತ್ರಿ ಎನ್ನದೆ ಮನೆ ಮುಂದೆ ನಿಲ್ಲಿಸಿರುತ್ತಿದ್ದ ಬೈಕ್‌ಗಳನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಹ್ಯಾಂಡಲ್ ಲಾಕ್ ಮುರಿದು ಓಡಿಸಿಕೊಂಡು ಪರಾರಿಯಾಗುತ್ತಿದ್ದ. ಈ ರೀತಿ ಗಳಿಸಿದ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸ...