ಭಾರತ, ಮೇ 16 -- 2025ರ ದೋಹಾ ಡೈಮಂಗ್ ಲೀಗ್‌ನಲ್ಲಿ ಐತಿಹಾಸಿಕ 90 ಮೀಟರ್ ಮಾರ್ಕ್ ಮುಟ್ಟಿದ್ದರ ನಡುವೆಯೂ ಭಾರತದ ಸ್ಟಾರ್ ಜಾವೆಲಿನ್ ಪಟು ನೀರಜ್ ಚೋಪ್ರಾಗೆ ಚಿನ್ನದ ಪದಕ ಕೈ ತಪ್ಪಿತು. ಮೂರನೇ ಪ್ರಯತ್ನದಲ್ಲಿ ತನ್ನ ವೈಯಕ್ತಿಕ ದಾಖಲೆಯ 90.23 ಮೀಟರ್ ದೂರ ಜಾವೆಲಿನ್ ಎಸೆದು ಬೆಳ್ಳಿಗೆ ತೃಪ್ತಿಪಟ್ಟ ನೀರಜ್, ಚಿನ್ನದ ಪದಕ ಜಯಿಸಿದ ಜರ್ಮನ್ನ ಜೂಲಿಯನ್ ವೆಬರ್ ಅವರನ್ನು ಹಿಂದಿಕ್ಕಲು ವಿಫಲರಾದರು. ವೆಬರ್ ಅವರು 91.06 ಮೀಟರ್ ಜಾವೆಲಿನ್ ಎಸೆದು ಸ್ವರ್ಣಕ್ಕೆ ಕೊರೊಳೊಡ್ಡಿದರು.
ದೋಹಾದ ಸುಹೀಮ್ ಬಿನ್ ಹಮದ್ ಕ್ರೀಡಾಂಗಣದಲ್ಲಿ ನಡೆದ ಲೀಗ್‌ನಲ್ಲಿ ನೀರಜ್ ಚೋಪ್ರಾ 90 ಮೀಟರ್ ಗಡಿ ದಾಟಿದರು. ಇದು ಅವರ ವೃತ್ತಿಜೀವನದ ಗರಿಷ್ಠ ಸಾಧನೆ. 27 ವರ್ಷದ ನೀರಜ್ ಚೋಪ್ರಾ ಶುಕ್ರವಾರ (ಮೇ 16) ರಾತ್ರಿಯ ಮೂರನೇ ಥ್ರೋನಲ್ಲಿ ಈ ಸಾಧನೆ ಮಾಡಿದರು. ನೀರಜ್ ಈ ಮೈಲಿಗಲ್ಲು ಸಾಧಿಸಿದ ಮತ್ತು ರಾಷ್ಟ್ರೀಯ ದಾಖಲೆಯನ್ನು ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತದ ಪರ ಅತಿ ದೂರ ಎಸೆದ ದಾಖಲೆಯೂ ಅವರ ಹೆಸರಿನಲ್ಲೇ ಇತ್ತು....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.