ಭಾರತ, ಜನವರಿ 27 -- ಇಡ್ಲಿ, ದೋಸೆ ಇತ್ಯಾದಿ ಉಪಾಹಾರಕ್ಕೆ ದಿನಾ ಒಂದೇ ರೀತಿಯ ಚಟ್ನಿ ತಿಂದು ಬೇಸರವಾಗಿದ್ದರೆ ಹೊಸ ರುಚಿಯ ಚಟ್ನಿಯನ್ನು ತಯಾರಿಸಿ. ತೆಂಗಿನಕಾಯಿ ಚಟ್ನಿ, ಕಡಲೆಕಾಯಿ ಚಟ್ನಿ ತಯಾರಿಸುವುದು ಸಾಮಾನ್ಯ. ಹೀಗಾಗಿ ಸ್ವಲ್ಪ ವಿಭಿನ್ನವಾಗಿ ಬಿಳಿ ಎಳ್ಳಿನ ಚಟ್ನಿಯನ್ನು ತಯಾರಿಸಿ. ಇದು ಆರೋಗ್ಯಕ್ಕೂ ಒಳ್ಳೆಯದು, ರುಚಿಕರವೂ ಹೌದು. ರೊಟ್ಟಿ, ದೋಸೆ, ಇಡ್ಲಿ ಜೊತೆ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಹಾಗಿದ್ದರೆ ಇದನ್ನು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು: ಬಿಳಿ ಎಳ್ಳು- ಅರ್ಧ ಕಪ್, ಒಣಮೆಣಸಿನಕಾಯಿ- 2, ಟೊಮೆಟೊ- 1, ಹುಣಸೆಹಣ್ಣು- ಸಣ್ಣ ನಿಂಬೆಹಣ್ಣಿನ ಗಾತ್ರ, ಬೆಳ್ಳುಳ್ಳಿ ಎಸಳು- ಮೂರರಿಂದ ನಾಲ್ಕು, ಶುಂಠಿ- 1 ಸಣ್ಣ ಇಂಚು, ಕೊತ್ತಂಬರಿ ಸೊಪ್ಪು- ಸ್ವಲ್ಪ, ಪುದೀನಾ- ಸ್ವಲ್ಪ, ಮೆಂತ್ಯ- 4 ಕಾಳು, ಹಸಿ ಮೆಣಸಿನಕಾಯಿ- 3, ಕರಿಬೇವಿನ ಎಲೆ- ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.

ಇದನ್ನೂ ಓದಿ: ಕಿತ್ತಳೆ ತಿಂದು ಸಿಪ್ಪೆ ಎಸಿಬೇಡಿ, ಇದರಿಂದ ತಯಾರಿಸಬಹುದು ರುಚಿಕರ ಚಟ್...