ಭಾರತ, ಮಾರ್ಚ್ 8 -- ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿ ಗ್ರಾಮದಲ್ಲಿ ಜಾತ್ರೆ ಸಂಭ್ರಮ ಮನೆಮಾಡಿದೆ. ಇಂದಿನಿಂದಲೇ (ಮಾ.8) ಹಬ್ಬದ ವಾತಾವರಣವಿದ್ದು, ಮಾರ್ಚ್‌ 9ರಂದು ಶನಿಮಹಾತ್ಮಸ್ವಾಮಿಯ ಎಪ್ಪತ್ತನೇ ಬ್ರಹ್ಮ ರಥೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ 8 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಅಲ್ಲದೆ ಎಲ್ಲಾ ದಿನಗಳಲ್ಲೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ದೂರದ ದೂರದಿಂದ ಜನರು ಬರುವ ನಿರೀಕ್ಷೆ ಇದೆ.

ಕನಸವಾಡಿ ಗ್ರಾಮದ ಶನಿಮಹಾತ್ಮ ಸ್ವಾಮಿಯವರಿಗೆ ಮಾರ್ಚ್‌ 09ರ ಭಾನುವಾರ ಮಧ್ಯಾಹ್ನ 01:35ರಿಂದ 02:20 ಗಂಟೆಗೆ ಸಲ್ಲುವ ಶುಭ ಮಿಥುನ ಲಗ್ನದಲ್ಲಿ ಬ್ರಹ್ಮ ರಥೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಆಮಂತ್ರಣ ಪತ್ರಿಕೆಯಲ್ಲಿ ತಿಳಿಸಿದೆ. ಒಂದು ವಾರಗಳ ಕಾಲ ಅದ್ದೂರಿ ಜಾತ್ರಾ ಮಹೋತ್ಸವ ನಡೆಯಲಿದ್ದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಕರ್ಷಣೆಯಾಗಿವೆ. ಕಾರ್ಯಕ್ರಮಕ್ಕೆ ಊರ-ಪರವೂರ ಭಕ್ತರನ್ನು ಆಹ್ವಾನಿಸಲಾಗಿದೆ.

ಮಾರ್ಚ್‌ 9ರಂದು ಕಲಶಾರ್ಚನ...