ಭಾರತ, ಏಪ್ರಿಲ್ 22 -- ಶತಾಯ ಗತಾಯ ಶಿವಣ್ಣ ಮಾಕಾಳವ್ವನ ಪಲ್ಲಕ್ಕಿ ಹೊರುವುದನ್ನು ತಪ್ಪಿಸಬೇಕೆಂದು ವೀರಭದ್ರ ಮಾಂತ್ರಿಕನ ನೆರವಿನಿಂದ ದಿಗ್ಬಂಧನ ಹಾಕಿಸಿದ್ದಾನೆ. ಮಡಿಯುಟ್ಟು ಅಮ್ಮನ ಪಲ್ಲಕ್ಕಿ ಮುಟ್ಟುತ್ತಿದ್ದಂತೆ ಶಾಕ್‌ ಹೊಡೆದಿದೆ.

ಅಚ್ಚರಿಯ ರೀತಿಯಲ್ಲಿ ವೀರಭದ್ರ ಗೆದ್ದ ಖುಷಿಯಲ್ಲಿದ್ದಾನೆ. ಆದರೆ, ದೇವಿ ಸ್ಮರಣೆ ಮಾಡಿ ಪಲ್ಲಕ್ಕಿಯನ್ನು ಹೊತ್ತು ನಿಂತೇ ಬಿಟ್ಟಿದ್ದಾನೆ ಮಾರಿಗುಡಿ ಶಿವಣ್ಣ.

ಅತ್ತ ಪಲ್ಲಕ್ಕಿಯನ್ನ ಶಿವಣ್ಣ ಎತ್ತೇ ಬಿಟ್ಟನಲ್ಲ ಎಂದು ವೀರಭದ್ರನಿಗೆ ಹೇಳಿದ್ದಾನೆ ಛತ್ರಿ. ಬರೀ ಪಲ್ಲಕ್ಕಿ ಎತ್ತೋದಲ್ಲ, ದೇವಿ ಮೈಮೇಲೆ ಬರಬೇಕು ಅದು ಮುಖ್ಯ ಎಂದಿದ್ದಾನೆ ವೀರಭದ್ರ.

ಅಷ್ಟರಲ್ಲಿ ಶಿವಣ್ಣನ ಮೈಮೇಲೆ ಮಾಕಾಳವ್ವನ ಆವಾಹನೆಯಾಗಿದೆ. ಪಲ್ಲಕ್ಕಿ ಹೊತ್ತು ಆರ್ಭಟಿಸಿದ್ದಾನೆ ಶಿವಣ್ಣ. ಇದನ್ನು ನೋಡಿದ ವೀರಭದ್ರ ಒಳಗೊಳಗೆ ನಡುಗಿದ್ದಾನೆ.

ತುಂಬಿದ ಕೊಡ ತುಳುತ್ತೆ, ತಾಯಿ ಮಕ್ಕಳ ಮಧ್ಯೆ ಅದ್ಯಾವ ಶಕ್ತಿ ಬಂದ್ರುವೆ, ರಕ್ತ ಚೆಲ್ಲುತ್ತೆ ಎಂದು ಮಾಕಾಳವ್ವ ಶಿವಣ್ಣನ ಬಾಯಿಂದ ಹೇಳಿಸಿದ್ದಾಳೆ.

ಈ ಮಾತುಗಳನ್ನು ಕೇಳಿದ ಪಾರ್ವ...