Bengaluru, ಮೇ 8 -- ಅರ್ಥ: ಪಂಚಮಹಾಭೂತಗಳು, ಅಹಂಕಾರ, ಬುದ್ದಿ, ಅವ್ಯಕ್ತವಾದದ್ದು, ಹತ್ತು ಇಂದ್ರಿಯಗಳು ಮತ್ತು ಮನಸ್ಸು, ಐದು ಇಂದ್ರಿಯ ವಿಷಯಗಳು, ಬಯಕೆ, ದ್ವೇಷ, ಸುಖ, ದುಃಖ, ಮೊತ್ತ, ಚೇತನ, ಧೃತಿ ಸಂಕ್ಷೇಪವಾಗಿ ಇವನ್ನು ಕ್ಷೇತ್ರ ಮತ್ತು ಅದರ ಪರಸ್ಪರ ಪ್ರತಿಕ್ರಿಯೆಗಳು ಎಂದು ಪರಿಗಣಿಸುತ್ತಾರೆ.

ಭಾವಾರ್ಥ: ಮಹರ್ಷಿಗಳು, ವೇದಸ್ತೋತ್ರಗಳು ಮತ್ತು ವೇದಾಂತಸೂತ್ರದ ಸೂತ್ರಗಳು ಇವುಗಳ ಅಧಿಕಾರಯುತ ಹೇಳಿಕೆಗಳಿಂದ ಜಗತ್ತಿನ ಘಟಕಾಂಶಗಳನ್ನು ಹೀಗೆ ಅರ್ಥಮಾಡಿಕೊಳ್ಳಬಹುದು. ಮೊದಲನೆಯದಾಗಿ ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶ ಇವುಗಳಿವೆ. ಇವು ಪಂಚಮಹಾಭೂತಗಳು. ಅನಂತರ ಅಹಂಕಾರ, ಬುದ್ದಿ ಮತ್ತು ಪ್ರಕೃತಿಯ ಮೂರು ಗುಣಗಳ ಅವ್ಯಕ್ತ ಹಂತ. ಇದಾದ ಮೇಲೆ ತಿಳುವಳಿಕೆಯ ಗ್ರಹಿಕೆಗಾಗಿರುವ ಐದು ಇಂದ್ರಿಯಗಳು ಕಣ್ಣುಗಳು, ಕಿವಿಗಳು, ಮೂಗು, ನಾಲಿಗೆ ಮತ್ತು ಚರ್ಮ. ಅನಂತರ ಐದು ಕರ್ಮೇಂದ್ರಿಯಗಳು ಶಬ್ದ, ಕಾಲುಗಳು, ಕೈಗಳು, ಗುದ ಮತ್ತು ಜನನೇಂದ್ರಿಯಗಳು. ಇಂದ್ರಿಯಗಳ ಮೇಲೆ ಮನಸ್ಸಿದೆ; ಅದು ಒಳಗಿದೆ. ಅದನ್ನು ಅಂತರೇಂದ್ರಿಯ ಎಂದು ಕರ...